ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೊಡ್ಡ ಆಲದಮರ ಗ್ರಾಮದಲ್ಲಿ ಸರಣಿ ಕಳ್ಳತನ

Published 11 ಜುಲೈ 2024, 6:11 IST
Last Updated 11 ಜುಲೈ 2024, 6:11 IST
ಅಕ್ಷರ ಗಾತ್ರ

ಶಿರಾ: ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿ ದೊಡ್ಡ ಆಲದಮರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಬೀಗ ಹಾಕಿದ್ದ ನಾಲ್ಕು ಮನೆಗಳಿಗೆ ಕಳ್ಳರು ನುಗ್ಗಿ ಸರಣಿ ಕಳ್ಳತನ ಮಾಡಿದ್ದಾರೆ.

ದೊಡ್ಡ ಆಲದಮರ ಗ್ರಾಮದ ಲೋಕೇಶ್, ಪ್ರಸನ್ನಕುಮಾರ್, ರೇಣುಕಮ್ಮ ಮತ್ತು ಲಕ್ಷ್ಮಮ್ಮ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.

ಮನೆಗಳಿಗೆ ಬೀಗ ಹಾಕಿದ್ದು, ಮನೆಯಲ್ಲಿ ಯಾರು ಇಲ್ಲ ಎನ್ನುವುದನ್ನು ಗಮನಿಸಿರುವ ಕಳ್ಳರು ಬೆಳಗಿನ ಜಾವ 1ರಿಂದ 4 ಗಂಟೆ ಸಮಯದಲ್ಲಿ ಕಳವು ಮಾಡಿದ್ದಾರೆ.

ಹಾರೆಕೋಲಿನಿಂದ ಮನೆಯ ಬಾಗಿಲು ಮೀಟಿ ಡೋರ್‌ಲಾಕ್‌ ತೆರೆದು ಮನೆಯೊಳಗೆ ನುಗ್ಗಿರುವ ಕಳ್ಳರು ಮನೆಯಲ್ಲಿದ್ದ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿ 6 ಗ್ರಾಂ ತೂಕದ ಚಿನ್ನದ ಸರ, 5 ಗ್ರಾಂ ಕಿವಿ ಚೈನ್, 6 ಗ್ರಾಂ ಕಿವಿಯೋಲೆ ಹಾಗೂ ₹10 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.

ಕಳ್ಳಂಬೆಳ್ಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT