ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಶಾಲಾ-ಕಾಲೇಜುಗಳಲ್ಲಿ ಸರಣಿ ಕಳ್ಳತನ

Published 14 ಆಗಸ್ಟ್ 2024, 14:33 IST
Last Updated 14 ಆಗಸ್ಟ್ 2024, 14:33 IST
ಅಕ್ಷರ ಗಾತ್ರ

ಹುಳಿಯಾರು: ಹುಳಿಯಾರು- ಕೆಂಕೆರೆ ಕೆಪಿಎಸ್‌ ಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮಂಗಳವಾರ ರಾತ್ರಿ ಸರಣಿ ಕಳ್ಳತನವಾಗಿದೆ.

ಕೆಪಿಎಸ್‌ ಶಾಲೆಯಲ್ಲಿ ಎಂಟು ಬ್ಯಾಟರಿ, ಮೂರು ಲ್ಯಾಪ್‌ಟಾಪ್‌, ಒಂದು ಡಿವಿಆರ್‌ ಕಳ್ಳತನವಾಗಿದೆ. ಪದವಿ ಪೂರ್ವ ಕಾಲೇಜಿನಲ್ಲಿ ಆರು ಬ್ಯಾಟರಿ, ಎರಡು ಡಿವಿಆರ್, ನಾಲ್ಕು ಸಿ.ಸಿ ಟಿವಿ ಕ್ಯಾಮೆರಾ, ಪ್ರಥಮ ದರ್ಜೆ ಕಾಲೇಜಿನಲ್ಲಿ 16 ಬ್ಯಾಟರಿ, ಒಂದು ಡಿವಿಆರ್‌, ಒಂದು ಯುಪಿಎಸ್‌ಗಳನ್ನು ಕದ್ದು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಶ್ವಾನದಳದ ತಂಡ ಭೇಟಿ ನೀಡಿತ್ತು. ಹುಳಿಯಾರು ಪೊಲೀಸರು ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT