ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಧರ್ಮದ ವಿರುದ್ಧ ಹೋರಾಡಿದ ಶ್ರೀಕೃಷ್ಣ: ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ

Published 27 ಆಗಸ್ಟ್ 2024, 4:53 IST
Last Updated 27 ಆಗಸ್ಟ್ 2024, 4:53 IST
ಅಕ್ಷರ ಗಾತ್ರ

ತುಮಕೂರು: ‘ಅನ್ಯಾಯ, ಅಧರ್ಮದ ವಿರುದ್ಧ ಆಯುಧಗಳಿಲ್ಲದೆ ಹೋರಾಡಿ ನ್ಯಾಯ ಒದಗಿಸಿ, ಲೋಕಕ್ಕೆ ಮನುಷ್ಯತ್ವ ಸಾರಿದ ವ್ಯಕ್ತಿ ಶ್ರೀಕೃಷ್ಣ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸೋಮವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಗೊಲ್ಲರ (ಯಾದವ) ಸಂಘದಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತನ್ನ ನಡೆ-ನುಡಿ ಮೂಲಕ ಲೋಕಕ್ಕೆ ಮನುಷ್ಯತ್ವದ ಮಾರ್ಗ ತೋರಿಸಿಕೊಟ್ಟಿದ್ದಾರೆ. ಭಗವದ್ಗೀತೆಯಲ್ಲಿ ಮನುಷ್ಯ ಜೀವನದ ಪ್ರತಿ ಹಂತವನ್ನೂ ವಿವರಿಸುವ ಮೂಲಕ ಸದಾ ಮಾನವ ಕುಲಕ್ಕಾಗಿ ಬದುಕಿದ್ದ ಶ್ರೀಕೃಷ್ಣನ ತತ್ವಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ‘ಶ್ರೀಕೃಷ್ಣನ ಭಕ್ತಿ, ಇತಿಹಾಸ, ಆದರ್ಶಗಳು ಇಂದಿನ ಸಮಾಜಕ್ಕೆ ಅಗತ್ಯ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಗೊಲ್ಲ ಸಮುದಾಯದ ತುರುವೇಕೆರೆ ತಾಲ್ಲೂಕು ಮಚೇನಹಳ್ಳಿ ಕರಿಯಪ್ಪ, ತುಮಕೂರಿನ ಟಿ.ಮುರಳೀಕೃಷ್ಣಪ್ಪ, ಸಾಗರನಹಳ್ಳಿಯ ಜಯಮ್ಮ ಅವರನ್ನು ಸನ್ಮಾನಿಸಲಾಯಿತು.

ಉಪತಹಶೀಲ್ದಾರ್ ಕಮಲಮ್ಮ, ಜಗದೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು.ಮಿರ್ಜಿ, ಜಿಲ್ಲಾ ಗೊಲ್ಲರ ಸಂಘ ಅಧ್ಯಕ್ಷ ಜಿ.ಚಂದ್ರಶೇಖರ್‌ಗೌಡ, ಸಂಘದ ಖಜಾಂಚಿ ಚಿಕ್ಕೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಪ್ರೇಮಾ ಮಹಾಲಿಂಗಪ್ಪ, ಪ್ರಾಂಶುಪಾಲರಾದ ಅಕ್ಕಮ್ಮ, ಶ್ರೀಕೃಷ್ಣ ಕಲಾ ಸಂಘ ಅಧ್ಯಕ್ಷ ಚಿಕ್ಕಪ್ಪಯ್ಯ, ಮುಖಂಡರಾದ ನಿಕೇತ್ ರಾಜ್ ಮೌರ್ಯ, ಹನುಮಂತರಾಜು ಮೊದಲಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT