ಭಾನುವಾರ, ಮೇ 9, 2021
19 °C

ಸಿದ್ಧಗಂಗಾ ಮಠದ ದ್ವಾರದಲ್ಲಿ ಸ್ಯಾನಿಟರಿ ಸುರಂಗ ಮಾರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಸಿದ್ಧಗಂಗಾ ಮಠಕ್ಕೆ ಭೇಟಿ ನೀಡುವ ಭಕ್ತರಿಗಾಗಿ ಮಠದಲ್ಲಿ ಕಲ್ಪಶುದ್ಧಿ ಸ್ಯಾನಿಟರಿ ಸುರಂಗ ಮಾರ್ಗ ಸ್ಥಾಪಿಸಲಾಗಿದೆ. ಸೋಮವಾರ ಸಿದ್ಧಲಿಂಗ ಸ್ವಾಮೀಜಿ ಘಟಕ ಉದ್ಘಾಟಿಸಿದರು.

ಕ್ಯಾತ್ಸಂದ್ರದಿಂದ ಮಠಕ್ಕೆ ಪ್ರವೇಶ ಪಡೆಯುವ ವಸ್ತುಪ್ರದರ್ಶನದ ಮುಂಭಾಗದ ಗೇಟ್ ಬಳಿ ಈ ಘಟಕ ಸ್ಥಾಪಿಸಲಾಗಿದೆ. ಸಂಜೀವಿನಿ ರಕ್ತನಿಧಿ ಕೇಂದ್ರದ ಅರುಣ್‍ಕುಮಾರ್ ಇದನ್ನು ಕೊಡುಗೆಯಾಗಿ ನೀಡಿದ್ದಾರೆ. ಎಸ್‍ಐಟಿ ಕಾಲೇಜು ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿ ಚಿದಾನಂದ್ ಈ ಘಟಕ ರೂಪಿಸಿದ್ದಾರೆ.

ಸಿದ್ಧಲಿಂಗ ಸ್ವಾಮೀಜಿ, ‘ಇಲ್ಲಿ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತದೆ. ಹೀಗಾಗಿ ಮಠಕ್ಕೆ ಬರುವ ಭಕ್ತರಿಗೆ ಪ್ರತ್ಯೇಕವಾಗಿ ಸ್ಯಾನಿಟೈಸರ್ ಹಾಕುವ ಅವಶ್ಯಕತೆ ಇಲ್ಲ. ಗೇಟ್‍ನಲ್ಲೆ ಥರ್ಮಲ್ ಸ್ಕ್ಯಾನಿಂಗ್ ಸಹ ಮಾಡಲಾಗುವುದು’ ಎಂದು ಹೇಳಿದರು.

ಎಸ್‍ಐಟಿ ಕಾಲೇಜು ಸಿಇಒ ಡಾ.ಶಿವಕುಮಾರಯ್ಯ, ಎಸ್‍ಐಟಿ ನಿರ್ದೇಶಕ ಎಂ.ಎನ್.ಚನ್ನಬಸಪ್ಪ, ಪ್ರಾಂಶುಪಾಲ ಶಿವಾನಂದ್, ಪುನೀತ್, ಅರುಣ್‍ಕುಮಾರ್, ಚಿದಾನಂದ್, ಸುರೇಶ್, ಗೌರಿಶಂಕರ್, ಲೋಹಿತ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು