ತೋವಿನಕೆರೆ: ಸಿದ್ಧರಬೆಟ್ಟದ ಈಶ್ವರ ದೇವಾಲಯ ಸಮೀಪ ಬುಕ್ಕಾಪಟ್ಟಣ ದೊಡ್ಡಮ್ಮ ದೇವರು, ಕುರಂಕೋಟೆ ದೊಡ್ಡಕಾಯಪ್ಪ ದೇವರ ಮೆರವಣಿಗೆ ಇರುವುದರಿಂದ ಹಲವು ಹಳ್ಳಿಗಳ ನೂರಾರು ಜನರು ಬೆಟ್ಟದ ದಾರಿಯನ್ನು ಅಚ್ಚುಕಟ್ಟು ಮಾಡಿದರು.
ಪ್ರತಿ ಐದು ವರ್ಷಕ್ಕೆ ದೊಡ್ಡಮ್ಮ ದೇವರು ಕುರಂಕೋಟೆ ಬೆಟ್ಟ ಹತ್ತಿ ಮತ್ತೆ ಇಳಿಯುವುದು ನೂರಾರು ವರ್ಷಗಳಿಂದ ವಾಡಿಕೆ.
ಕುರಂಕೋಟೆ ಪಂಚಾಯತಿಯ ಗೊಲ್ಲರಹಟ್ಟಿ, ಮಣುವಿನಕುರಿಕೆ, ಶಂಬೋನಹಳ್ಳಿ, ಕುರುಬರಹಳ್ಳಿ, ಬಿಕ್ಕೆಗುಟ್ಟೆ, ಬಂಡೆಹಳ್ಳಿ ಸೇರಿದಂತೆ ಹಲವು ಹಳ್ಳಿಗಳ ಜನರು ದಾರಿಯಲ್ಲಿ ಬೆಳದಿರುವ ಗಿಡಗಳನ್ನು ತೆಗೆದು ಅಚ್ಚುಕಟ್ಟು ಮಾಡಿದರು. ಕಳೆದ ವರ್ಷ ಬಿದ್ದ ಮಳೆಯಿಂದ ಹಲವು ಹಳ್ಳ, ಗುಂಡಿ ನಿರ್ಮಾಣವಾಗಿತ್ತು. ಇವುಗಳನ್ನು ಮುಚ್ಚಿ ಜನರು ಸುಸೂತ್ರವಾಗಿ ಇಳಿಯಲು ಹಾದಿ ನಿರ್ಮಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.