ಶಿರಾ: ನಗರದ ಹಜರತ್ ಮಲ್ಲಿಕ್ ರೆಹಾನ್ ಪಾಷ ದರ್ಗಾ ಬಳಿ ಮೇ 31 ಮತ್ತು ಜೂನ್ 1ರಂದು ಮೊದಲ ಬಾರಿಗೆ ಕುರಿ- ಮೇಕೆ ಮೇಳ ಏರ್ಪಡಿಸಲಾಗಿದೆ.

ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ತುಮಕೂರು, ಶಿರಾ , ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸಹಯೋಗದೊಂದಿಗೆ ಬಕ್ರೀದ್ ಪ್ರಯುಕ್ತ ಮೇಳ ನಡೆಯಲಿದೆ.

ಜಿಲ್ಲೆಯಲ್ಲಿ ಕುರಿ ಸಾಕಾಣಿಕೆ ಮುಖ್ಯ ಕಸುಬಾಗಿದ್ದು, ಶಿರಾ ಕುರಿ ಮಾಂಸ ಉತ್ಕೃಷ್ಟವಾಗಿದ್ದು, ಆಧಿಕ ಬೇಡಿಕೆ ಹೊಂದಿದೆ. ಇತ್ತೀಚಿನ ದಿನಗಳಲ್ಲಿ ರೈತರು ಬಕ್ರೀದ್ ಸಂದರ್ಭದಲ್ಲಿ ಮಾರಾಟ ಮಾಡಲು ಟಗರು ಮತ್ತು ಹೋತ ಮರಿಗಳನ್ನು ವಿಶೇಷ ಆಸಕ್ತಿ ವಹಿಸಿ ಸಾಕಾಣಿಕೆ ಮಾಡಿ ನಗರಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ.

ಕುರಿ-ಮೇಕೆ ಮಾರಾಟಗಾರರು ಮತ್ತು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.