ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಡಿ ಬಿದ್ದ ಕಳ್ಳಂಬೆಳ್ಳ ಕೆರೆ

Published 22 ಆಗಸ್ಟ್ 2024, 5:14 IST
Last Updated 22 ಆಗಸ್ಟ್ 2024, 5:14 IST
ಅಕ್ಷರ ಗಾತ್ರ

ಶಿರಾ: ತಾಲ್ಲೂಕಿನ ಕಳ್ಳಂಬೆಳ್ಳ ಕೆರೆ ತುಂಬಿ ಕೋಡಿ ಬಿದ್ದಿರುವುದು ರೈತರಲ್ಲಿ ಸಂತಸ ತಂದಿದೆ.‌

ಕಳ್ಳಂಬೆಳ್ಳ ಕೆರೆಗೆ ಹೇಮಾವತಿ ನೀರು ಹರಿದ ಬಂದ ಜೊತೆಗೆ ಮಳೆ ಸಹ ಜೋರಾಗಿ ಬಂದ ಕಾರಣ ಕಳ್ಳಂಬೆಳ್ಳ ಕೆರೆ ತುಂಬಿ ಕೋಡಿ ಬೀಳುವಂತಾಗಿದೆ.

ಮೂರು ದಿನಗಳಿಂದ ಕಳ್ಳಂಬೆಳ್ಳ ಕೆರೆಯಿಂದ‌ ಮದಲೂರು ಹಾಗೂ ಶಿರಾ ದೊಡ್ಡ ಕೆರೆಗೆ ನೀರು ಹರಿಸಲಾಗುತ್ತಿದೆ‌.

ಮಂಗಳವಾರ ರಾತ್ರಿ ಬಂದ ಜೋರು ಮಳೆಯಿಂದಾಗಿ ಶಿರಾ ಹಾಗೂ ಮದಲೂರು ಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ತಹಶೀಲ್ದಾರ್ ಡಾ.ದತ್ತಾತ್ರೇಯ ಜೆ.ಗಾಧಾ ಹಾಗೂ ನಗರಸಭೆ ಪೌರಾಯುಕ್ತ ರುದ್ರೇಶ್ ಅವರು ಬುಧವಾರ ಕಳ್ಳಂಬೆಳ್ಳ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಿರಾ ಹಾಗೂ ಮದಲೂರು ಕೆರೆಗೆ ಯಥೇಚ್ಛವಾಗಿ ನೀರು ಹರಿಯುತ್ತಿರುವುದರಿಂದ ಸಾರ್ವಜನಿಕರು ಎಚ್ಚರದಿಂದ ಇರಬೇಕು, ಕೋಡಿ ನೀರು ಹರಿಯುವ ಮಾರ್ಗದಲ್ಲಿ, ಹಳ್ಳ ಮತ್ತು ನಾಲೆಯ ಬಳಿ ಪ್ರಾಣ ಹಾನಿ ಸಂಭವಿಸುವ ಸಾಧ್ಯತೆ ಇರುವುದರಿಂದ ನೀರಿಗೆ ಇಳಿಯದಂತೆ ಸೂಚಿಸಿದ್ದಾರೆ.

ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಕೆರೆ ತುಂಬಿ ಕೋಡಿ ಬಿದ್ದಿದ್ದು ತಹಶೀಲ್ದಾರ್ ಡಾ.ದತ್ತಾತ್ರೇಯ ಜೆ.ಗಾಧಾ ನಗರಸಭೆ ಪೌರಾಯುಕ್ತ ರುದ್ರೇಶ್ ಪರಿಶೀಲಿಸಿದರು
ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಕೆರೆ ತುಂಬಿ ಕೋಡಿ ಬಿದ್ದಿದ್ದು ತಹಶೀಲ್ದಾರ್ ಡಾ.ದತ್ತಾತ್ರೇಯ ಜೆ.ಗಾಧಾ ನಗರಸಭೆ ಪೌರಾಯುಕ್ತ ರುದ್ರೇಶ್ ಪರಿಶೀಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT