ಭಾನುವಾರ, ಮಾರ್ಚ್ 7, 2021
32 °C

ಚಿನ್ನಾಭರಣ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಮನೆಯ ಬಾಗಿಲು ಮುರಿದು ₹ 5.50 ಲಕ್ಷ ಮೌಲ್ಯದ ಚಿನ್ನಾಭರಣ, ಇತರ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಜಯನಗರ 1ನೇ ಮುಖ್ಯರಸ್ತೆಯ 2ನೇ ಕ್ರಾಸ್‌ನಲ್ಲಿ ನಡೆದಿದೆ.

ಆರ್. ಶಿವಲಿಂಗಯ್ಯ ಅವರು ಮನೆಗೆ ಬೀಗ ಹಾಕಿಕೊಂಡು ತಮ್ಮ ಪತ್ನಿ ಗಿರಿಜಮ್ಮ ಅವರೊಂದಿಗೆ ಜ. 23ರಂದು ಬೆಂಗಳೂರಿಗೆ ತೆರಳಿದ್ದರು. ಭಾನುವಾರ ಮನೆಯ ಬಳಿ ಬಂದಿದ್ದ ಹರೀಶ್ ಎಂಬುವರು ಮನೆಯಲ್ಲಿ ಕಳ್ಳತನವಾಗಿರುವ ವಿಚಾರವನ್ನು ಶಿವಲಿಂಗಯ್ಯ ಗಮನಕ್ಕೆ ತಂದಿದ್ದಾರೆ. ಅವರು ಬೆಂಗಳೂರಿನಿಂದ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ.

ಚೈನು, ನಾಲ್ಕು ಬಳೆ, ಉಂಗುರ, ಓಲೆ ಸೇರಿದಂತೆ 150 ಗ್ರಾಂ ಚಿನ್ನದ ಒಡವೆಗಳು, 500 ಗ್ರಾಂ ತೂಕದ ಬೆಳ್ಳಿ ಆಭರಣಗಳು, ಹೊಸದಾಗಿ ಮನೆಗೆ ತಂದಿಟ್ಟಿದ್ದ ಟಿ.ವಿ ಕಳವು ಮಾಡಲಾಗಿದೆ. ಮನೆಗೆ ಸಿ.ಸಿ ಟಿ.ವಿ ಅಳವಡಿಸಿದ್ದು, ಅದರ ಡಿವಿಆರ್ ‌ಅನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.