ಮಂಗಳವಾರ, ಡಿಸೆಂಬರ್ 1, 2020
26 °C

ಸಹಾಯವಾಣಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ
ಆರಂಭವಾಗಿದೆ. ಶಿಕ್ಷಕರು ನ.30ರವರೆಗೆ ಮೊಬೈಲ್ ಮೂಲಕ ಆನ್‌ಲೈನ್‌ ತಂತ್ರಾಂಶದಲ್ಲಿ ಶಿಕ್ಷಕ ಮಿತ್ರ/ಇಇಡಿಎಸ್ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬಹುದು.

ವರ್ಗಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ಯಾವುದೇ ಸಮಸ್ಯೆಗಳು ಇದ್ದಲ್ಲಿ ಕಚೇರಿಗೆ ವೇಳೆ ಮಾಹಿತಿ ಪಡೆಯಬಹುದು. ಸಹಾಯವಾಣಿ 0816–2278444, ಶಿಕ್ಷಣಾಧಿಕಾರಿಗಳಾದ ರಂಗಧಾಮಪ್ಪ–9480886950, ಎ.ಟಿ.ರಂಗದಾಸಪ್ಪ–9449126869 ಸಂಪರ್ಕಿಸಬಹುದು.

ಪತಿ ಪತ್ನಿ ಪ್ರಕರಣದಡಿ ಆದ್ಯತೆ ಬಯಸುವವರು ನ.1ರ ನಂತರ ಪಡೆದ, ವೈದ್ಯಕೀಯ ಮತ್ತು ಅಂಗವಿಕಲ ಆದ್ಯತೆಯವರು ಆ.1ರ ನಂತರ ಪಡೆದ ದೃಢೀಕರಣ ಪತ್ರ
ಸಲ್ಲಿಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.