ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತದಲ್ಲಿ ವಿದ್ಯಾರ್ಥಿ ಸಾವು

Published 18 ಡಿಸೆಂಬರ್ 2023, 7:23 IST
Last Updated 18 ಡಿಸೆಂಬರ್ 2023, 7:23 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನ ಆರ್ಲಹಳ್ಳಿ ಬಳಿ ಸೋಮವಾರ ದ್ವಿಚಕ್ರ ವಾಹನ‌ ಹಾಗೂ ಬೊಲೆರೊ ವಾಹನದ ನಡುವೆ ಅಪಘಾತ ಸಂಭವಿಸಿ‌ದ್ದು, ವಿದ್ಯಾರ್ಥಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ತಾಲ್ಲೂಕಿನ‌ ದೇವರಬೆಟ್ಟ ಗ್ರಾಮದ ನವೀನ್ ಕುಮಾರ್ (20) ಮೃತರು. ಹಿಂಬದಿ ಸವಾರ ಪ್ರಶಾಂತ್ ಅವರಿಗೆ ಗಾಯಗಳಾಗಿವೆ. ಪಟ್ಟಣದ ವೈಇಆರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿಕಾಂ‌ ವಿದ್ಯಾರ್ಥಿಗಳಾದ ನವೀನ್, ಪ್ರಶಾಂತ್ ಗ್ರಾಮದಿಂದ‌ ದ್ವಿಚಕ್ರ ವಾಹನದಲ್ಲಿ‌ ಕಾಲೇಜಿಗೆ ಬರುವಾಗ ಅಪಘಾತ ನಡೆದಿದೆ. ಪಟ್ಟಣ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT