ತುಮಕೂರು: ‘ಜೆಡಿಎಸ್ನವರ ವಿರುದ್ಧ ದೊಣ್ಣೆ ಹಿಡಿದು ನಿಂತು ಎಲೆಕ್ಷನ್ ಮಾಡಿ. ಶಾಸಕ ಗೌರಿಶಂಕರ್ ಬಂದರೆ ನೀರು ಬಿಡಿಸದೇ ಇರೋ ಕಳ್ಳ ಕಳ್ಳ ಎಂದು ಕೂಗಿ’ ಎಂದು ಮಾಜಿ ಶಾಸಕ ಬಿ.ಸುರೇಶ್ ಗೌಡ ಅವರು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ತಾಲ್ಲೂಕಿನ ಹೊನಸಿಗೆರೆಯಲ್ಲಿ ಈಚೆಗೆ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರ ಮಾತಿನ ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

‘ಶಾಸಕ ಗೌರಿಶಂಕರನೇನೂ ದೊಡ್ಡ ಮನುಷ್ಯ ಅಲ್ಲ. ಅವರಪ್ಪ ಪೊಲೀಸ್ ಆಗಿದ್ದವನು. ಅವನೂ ಶ್ರೀಮಂತ ಅಲ್ಲ. ನಮ್ಮ ದುಡ್ಡೇ ಹೊಡೆದು ನಮ್ಗೆ ಹಂಚ್ತಾನೆ. ಗಣಿ ಪ್ರಕರಣಗಳಲ್ಲಿ ಕೋಟಿ ಕೋಟಿ ಲೂಟಿ ಹೊಡೆದಿದ್ದಾನೆ’ ಎಂದು ಆರೋಪಿಸಿದರು.

‘ಅವನು ಹಣ ಕೊಟ್ಟರೆ ಚೆನ್ನಾಗಿ ಇಸ್ಕೊಳ್ಳಿ. ಚೆನ್ನಾಗಿ ತಿನ್ನಿ, ವೋಟ್ ಮಾತ್ರ ಬಿಜೆಪಿಗೆ ಹಾಕಿಸಬೇಕು. ಏನು ಬರುತ್ತೋ ಬರಲಿ. ಕುರುಕ್ಷೇತ್ರದಲ್ಲಿ ಪಾಂಡವರ ಹಿಂದೆ ಶ್ರೀಕೃಷ್ಣ ಪರಮಾತ್ಮ ಇದ್ದಂತೆ ನಾನೂ ನಿಮ್ಮ ಹಿಂದೆ ಇರುತ್ತೇನೆ’ ಎಂದು ಹುರಿದುಂಬಿಸಿದ್ದಾರೆ.

ಗೌರಿಶಂಕರ್ ದೂರು

ಚುನಾವಣೆ ನೀತಿ ಸಂಹಿತೆ ಜಾರಿ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಸುರೇಶ್ಗೌಡ ಅವರು ದೊಣ್ಣೆ ಹಿಡಿದು ಚುನಾವಣೆ ಮಾಡಿ, ಹಣ ಕೊಟ್ಟರೆ ತೆಗೆದುಕೊಳ್ಳಿ ಎಂದು ಪಕ್ಷದ ವರಿಷ್ಠರು ಹಾಗೂ ನಮ್ಮ ವಿರುದ್ಧ ಹೇಳಿಕೆ ನೀಡಿ ನಿಂದನೆ ಮಾಡಿದ್ದಾರೆ. ಈ ಕುರಿತು ಚುನಾವಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಲಿದ್ದೇನೆ’ ಎಂದು ಶಾಸಕ
ಡಿ.ಸಿ.ಗೌರಿಶಂಕರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.