ಶಿರಾ: ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿ ಕ್ಯಾತೆದೇವರಹಟ್ಟಿ ಗ್ರಾಮದಲ್ಲಿ ಆಗಸ್ಟ್ 10ರಿಂದ 12ರ ವರೆಗೆ ಕ್ಯಾತೆ ದೇವರ ಮತ್ತು ಕಾಟಮಲಿಂಗೇಶ್ವರ ದೇವಸ್ಥಾನದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
10ರಂದು ಕರೆಕಲ್ಲು ಚಿತ್ರಲಿಂಗೇಶ್ವರ ಸ್ವಾಮಿ, ಮುದ್ದೇನಹಳ್ಳಿ ಓಣಿಹಟ್ಟಿ ಈರಣ್ಣ ಸ್ವಾಮಿ, ಯತ್ತಪ್ಪನಹಟ್ಟಿಯ ಎತ್ತಪ್ಪ ಸ್ವಾಮಿ, ಜಾನಕಲ್ಲು ಕರಿಯಮ್ಮ ದೇವರುಗಳು ಬರಲಿವೆ. 12ರಂದು ಬೆಳಿಗ್ಗೆ 9ರಿಂದ 10ಗಂಟೆಗೆ ದೇವಾಲಯದ ಕಳಶ ಪ್ರತಿಷ್ಠಾಪನೆ ಹಾಗೂ ದೇವಾಲಯದ ಉದ್ಘಾಟನೆ ನಡೆಯಲಿದೆ.