ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಕಚೇರಿಗೆ ಮುತ್ತಿಗೆ

Last Updated 9 ಜನವರಿ 2021, 17:09 IST
ಅಕ್ಷರ ಗಾತ್ರ

ತುಮಕೂರು: ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಲ್ಲಿ ಅರ್ಜಿ ಸಲ್ಲಿಸಿರುವ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಆಗ್ರಹಿಸಿ ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾರ್ಮಿಕರು ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಅರ್ಜಿ ಸಲ್ಲಿಸಿ 2–3 ತಿಂಗಳು ಕಳೆದರೂ ಮನೆ ಕೆಲಸದವರು, ಮೆಕಾ
ನಿಕ್, ಟೈಲರ್, ಹಮಾಲಿಗಳಿಗೆಸ್ಮಾರ್ಟ್ ಕಾರ್ಡ್‌ ನೀಡಿಲ್ಲ. ತಕ್ಷಣ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಅಸಂಘಟಿತ ಕಾರ್ಮಿಕರಿಗೆ ಪಿಎಫ್, ಪಿಂಚಣಿ ನೀಡಲು ಮುಂದಿನ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಬೇಕು. ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಜಿಲ್ಲೆಯ ಕಾರ್ಮಿಕರ ಕುಂದು–ಕೊರತೆ ಬಗೆಹರಿಸಲು ವರ್ಷಕ್ಕೆ 2–3 ಸಭೆ ನಡೆಸಬೇಕು. ಕಟ್ಟಡ ಕಾರ್ಮಿಕರಿಗೆ ಸೌಲಭ್ಯಗಳನ್ನು ನೀಡುವಲ್ಲಿನ ವಿಳಂಬ ತಪ್ಪಿಸಬೇಕು. ಎಲ್ಲೆಡೆ ಕನಿಷ್ಠ ವೇತನ ನೀಡುವುದರ ಜತೆಗೆ ಕಾರ್ಮಿಕ ಕಾನೂನುಗಳನ್ನು ಜಾರಿಮಾಡಬೇಕು ಎಂದು ಒತ್ತಾಯಿಸಿದರು.

ಸಂಘಟಿತ ವಲಯದ ಕೈಗಾರಿಕೆಗಳಲ್ಲಿ ಕೋವಿಡ್–19 ಸಂದರ್ಭವನ್ನು ಬಳಸಿಕೊಂಡು ಸಮಸ್ಯೆಗಳು ಇಲ್ಲದಿ
ದ್ದರೂ ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿ ಸಲಾಗುತ್ತಿದೆ. 12 ಗಂಟೆ ದುಡಿಸಿ ಕೊಂಡು, ಕಾಯಂಗೊಂಡ ಹಿರಿಯ ಕಾರ್ಮಿಕರನ್ನು ಸುಳ್ಳು ನೆಪ ಮುಂದೆ ಮಾಡಿ ಕೆಲಸದಿಂದ ತೆಗೆದು, ಮತ್ತೆ ಗುತ್ತಿಗೆ ಆಧಾರದಲ್ಲಿ ಅದೇ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗುತ್ತಿದೆ. 4–5 ವರ್ಷ ದುಡಿಸಿಕೊಂಡು ಸೇವೆ ಕಾಯಂ ಮಾಡದರೆ ಕೆಲಸದಿಂದ ಹೊರಹಾಕುವ ಮೂಲಕ ಶೋಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಹಿರಿಯ ಕಾರ್ಮಿಕ ನಿರೀಕ್ಷಕ ಜಯಪ್ರಕಾಶ್, ಲಕ್ಷ್ಮಿಕಾಂತ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡ ರಾದ ಸೈಯದ್ ಮುಜೀಬ್, ಎನ್.ಕೆ. ಸುಬ್ರಮಣ್ಯ, ತಿಮ್ಮೇಗೌಡ, ನಾಗರಾಜು, ಪಾರ್ವತಮ್ಮ, ಕಲೀಲ್, ಶಂಕರಪ್ಪ, ಜಗ ದೀಶ್, ರವಿರಾಜು, ನಿಸಾರ್ ಅಹಮದ್, ನಸೀಮಾ ಬಾನು, ನಾಗರಾಜು, ರಾಮಾಂಜಿನಿ, ದಿಸಾ ಲೋಕೇಶ್, ಷಣಮ್ಮಖಪ್ಪ, ಲಕ್ಷ್ಮಿಕಾಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT