ನಾಮಫಲಕ ಅಳವಡಿಸಲು ನಗರಸಭೆಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೋಟಿ ರೂಪಾಯಿ ಬಜೆಟ್ ಮಂಡನೆ ಮಾಡುವ ನಗರಸಭೆ ಹಾಗೂ ಜಿಲ್ಲೆಯಾಗುವ ಅರ್ಹತೆಯಿದ್ದರೂ ಅದಕ್ಕೆ ತಕ್ಕಂತೆ ಅಭಿವೃದ್ಧಿಯಾಗಿಲ್ಲ.
ಶ್ರೀಕಂಠ, ಮಾವಿನತೋಪು
ಈಗಾಗಲೇ ಮೂರು ವಾರ್ಡ್‌ಗಳಿಗೆ ನಗರೋತ್ಥಾನದಡಿ ನಾಮಫಲಕ ಅಳವಡಿಕೆ ಕೆಲಸ ಪ್ರಾರಂಭವಾಗಿದೆ. ಉಳಿದ ವಾರ್ಡ್‌ಗಳಿಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು.
ವಿಶ್ವೇಶ್ವರ ಬದರಗಡೆ, ಪೌರಯುಕ್ತ
ಬೇರೆ ನಗರಗಳಿಂದ ತಿಪಟೂರಿಗೆ ಬರುವ ಅಪರಿಚತರಿಗೆ ವಾರ್ಡ್‌ಗಳಲ್ಲಿ ಸರಿಯಾದ ನಾಮಫಲಕವಿಲ್ಲದೆ ಹೋದರೆ ವಿಳಾಸ ಹುಡುಕುವುದು ಕಷ್ಟಕರ. ನಾಮಫಲಕ ಅಳವಡಿಸುವಾಗ ಆಯಾ ಸ್ಥಳದ ಮಹತ್ವ ಗುರುತಿಸಿದರೆ ಇತಿಹಾಸ ತಿಳಿದುಕೊಳ್ಳಲು ಸಹಾಯಕ.
ಅಂಜನಾಮೂರ್ತಿ, ಛಲವಾಧಿ ಮಹಾಸಭಾ ಪ್ರಧಾನ ಕಾರ್ಯದರ್ಶಿ
ಮೊದಲ ಹಂತದಲ್ಲಿ ಮೂರು ವಾರ್ಡ್‌ಗಳಲ್ಲಿ ನಗರೋತ್ಥಾನ ಅನುದಾನದಲ್ಲಿ ನಾಮಫಲಕ ಅಳವಡಿಸಲಾಗುತ್ತಿದೆ. ಪುರಸಭೆ ಎಂದು ಇರುವ ಬೋರ್ಡ್‌ಗಳನ್ನು ಪತ್ತೆಹಚ್ಚಿ ಶೀಘ್ರ ಬದಲಾಯಿಸಲಾಗುವುದು.
ಯಮುನಾ ಧರಣೇಶ್, ನಗರಸಭೆ ಅಧ್ಯಕ್ಷೆ
ತಿಪಟೂರು ಷಡಾಕ್ಷರ ಮಠದ ನಾಮಫಲಕಕ್ಕೆ ಗಿಡ ಗಂಟೆ ಬಳ್ಳಿಗಳಿಂದ ಅವೃತ್ತವಾಗಿದೆ