ಭದ್ರಾಪುರದ ಪಾಲಾಕ್ಷಯ್ಯ (50), ನಿರ್ಮಲಾ (45) ಮೃತರು. ಹಸುಗಳನ್ನು ಮೇಯಿಸಿಕೊಂಡು ಮಧ್ಯಾಹ್ನದ ಸಮಯದಲ್ಲಿ ಮೈತೊಳೆಯಲು ಕೆರೆ ಬಳಿ ಹೋಗಿದ್ದರು. ಈ ವೇಳೆ ನಿರ್ಮಲಾ ಕಾಲು ಜಾರಿ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಮುಂದಾದ ಪಾಲಾಕ್ಷಯ್ಯ ಸಹ ನೀರು ಪಾಲಾಗಿದ್ದಾರೆ.
ಕೆರೆಯಲ್ಲಿ ಮೃತದೇಹ ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಿಬ್ಬನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನು ಹೊರ ತೆಗೆದರು. ಕಿಬ್ಬನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.