ತುಮಕೂರು: ನಗರದ ವಿಶ್ವವಿದ್ಯಾಲಯದ ಮೈದಾನದಲ್ಲಿ ಶನಿವಾರದಿಂದ ಆರಂಭವಾದ ರಾಷ್ಟ್ರೀಯ ಹಿರಿಯರ ಕೊಕ್ಕೊ ಚಾಂಪಿಯನ್ ಶಿಪ್ನಲ್ಲಿ ರಾಜ್ಯದ ಪುರುಷರ ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಫೆ. 3ರ ವರೆಗೆ ಪಂದ್ಯಾವಳಿ ನಡೆಯಲಿದೆ.

ಕೊಕ್ಕೊ ಇಂಡಿಯಾ, ರಾಜ್ಯ ಅಮೆಚೂರ್ ಕೊಕ್ಕೊ ಅಸೋಸಿಯೇಷನ್ ವತಿಯಿಂದ ಚಾಂಪಿಯನ್ ಶಿಪ್ ಆಯೋಜಿಸಲಾಗಿದೆ.

ಪುರುಷರ ವಿಭಾಗದಲ್ಲಿ ಕರ್ನಾಟಕ ತಂಡ 11–06 ಪಾಯಿಂಟ್ಸ್ಗಳಿಂದ ಉತ್ತರಾಖಂಡ ತಂಡಕ್ಕೆ ಸೋಲುಣಿಸಿ ಗೆಲುವಿನ ಖಾತೆ ತೆರೆಯಿತು. ಹರಿಯಾಣ ವಿರುದ್ಧ ಒಡಿಶಾ (17–14), ಮಧ್ಯಪ್ರದೇಶ ವಿರುದ್ಧ ಚಂಡೀಗಢ (20–12), ಹಿಮಾಚಲ ಪ್ರದೇಶದ ವಿರುದ್ಧ ಉತ್ತರ ಪ್ರದೇಶ (17–12), ರಾಜಸ್ಥಾನದ ವಿರುದ್ಧ ಚಂಡೀಗಢ (17–15), ಛತ್ತೀಸ್ಗಡ ವಿರುದ್ಧ ಪಂಜಾಬ್ (17–15) ಗೆಲುವು ಸಾಧಿಸಿತು.

ಮಹಿಳೆಯರ ವಿಭಾಗದಲ್ಲಿ ನವದೆಹಲಿ ವಿರುದ್ಧ ಪಂಜಾಬ್ (15–02), ಮಧ್ಯಪ್ರದೇಶದ ವಿರುದ್ಧ ಹಿಮಾಚಲ ಪ್ರದೇಶ (15–12), ಪುದುಚೇರಿ ವಿರುದ್ಧ ಚಂಡೀಗಢ (13–07), ತೆಲಗಾಂಣ ವಿರುದ್ಧ ಮಹಾರಾಷ್ಟ್ರ (11–03) ತಂಡ ಜಯ ಸಾಧಿಸಿತು.

ಚಾಲನೆ: ರಾಜ್ಯ ಕೊಕ್ಕೊ ಫೆಡರೇಷನ್ ಅಧ್ಯಕ್ಷ ನಾಗರಾಜು ವಿ.ಬೈರಿ ಚಾಂಪಿಯನ್ಶಿಪ್ಗೆ ಚಾಲನೆ ನೀಡಿದರು. ಕೊಕ್ಕೊ ಇಂಡಿಯಾ ಜಿಲ್ಲಾ ಸಂಘಟನಾ ಸಮಿತಿ ಅಧ್ಯಕ್ಷ ಎನ್.ನರಸಿಂಹರಾಜು, ಸಮಿತಿಯ ಚಿನ್ನಮೂರ್ತಿ, ಶಿವಮೂರ್ತಿ, ಕೃಷ್ಣೇಗೌಡ, ಸುರೇಶ್ ಶರ್ಮ, ವಿನೋದ್ಕುಮಾರ್ ಸಿಂಗ್, ತರಬೇತುದಾರರಾದ ಪ್ರಭಾಕರ್, ಗುರುಪ್ರಸಾದ್, ಪ್ರದೀಪ್ಕುಮಾರ್, ಎಂ.ಎಚ್.ರಾಜು ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.