ತುಮಕೂರು: ಬೆಳ್ಳುಳ್ಳಿ ಮತ್ತೆ ದುಬಾರಿಯಾಗಿದ್ದು, ಸೊಪ್ಪು ಚೇತರಿಸಿಕೊಂಡಿದೆ. ತರಕಾರಿ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಬೇಳೆ ದರ ಅಲ್ಪ ಕಡಿಮೆಯಾಗಿದ್ದರೆ, ಕಾಳುಗಳು ಸ್ವಲ್ಪ ಏರಿಕೆ ಕಂಡಿವೆ.

ಬೆಳ್ಳುಳ್ಳಿ ದುಬಾರಿ: ಕಳೆದ ವಾರ ಅಲ್ಪ ಇಳಿಕೆ ಕಂಡಿದ್ದ ಬೆಳ್ಳುಳ್ಳಿ ಈ ವಾರ ಗಗನಮುಖಿಯಾಗಿದ್ದು, ಕೆ.ಜಿ ₹400 ಮುಟ್ಟಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇನ್ನೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಆವಕ ಕಡಿಮೆಯಾಗಿರುವುದು ದರ ಹೆಚ್ಚಳಕ್ಕೆ ಕಾರಣವಾಗಿದ್ದು, ಕೆಲ ದಿನಗಳು ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ವರ್ತಕರು ಹೇಳುತ್ತಿದ್ದಾರೆ.

ತರಕಾರಿ ಅಲ್ಪ ಅಗ್ಗ: ಒಮ್ಮೆಲೆ ದುಪ್ಪಟ್ಟಾಗಿದ್ದ ಕ್ಯಾರೇಟ್ ದರ ಈಗ ಎರಡು ವಾರದ ಹಿಂದಿನ ಮಟ್ಟಕ್ಕೆ ಬಂದಿದೆ. ಗೆಡ್ಡೆಕೋಸು, ಹೂಕೋಸು, ತೊಂಡೆಕಾಯಿ, ಹಾಗಲ ಕಾಯಿ, ನುಗ್ಗೆ ಕಾಯಿ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ. ಬದನೆಕಾಯಿ, ಎಲೆಕೋಸು ಬೆಲೆ ಅಲ್ಪ ಹೆಚ್ಚಳವಾಗಿದೆ. ಬೇಸಿಗೆ ಬಿಸಿಲು ಏರಿದಂತೆ ನಿಂಬೆ ಹಣ್ಣು ದುಬಾರಿಯಾಗುತ್ತಲೇ ಸಾಗಿದೆ. ಕಳೆದ ಎರಡು ವಾರದಿಂದ ಏರಿಕೆ ದಾಖಲಿಸಿದ್ದು, ಈಗ ಒಂದು ಹಣ್ಣು ₹5–6ಕ್ಕೆ ಹೆಚ್ಚಳವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಮತ್ತಷ್ಟು ದುಬಾರಿಯಾಗಿದೆ.

ಸೊಪ್ಪು ಚೇತರಿಕೆ: ಕಳೆದ ಎರಡು ತಿಂಗಳಿಂದ ತೀವ್ರ ಕುಸಿತ ಕಂಡಿದ್ದ ಸೊಪ್ಪು ಚೇತರಿಕೆಯತ್ತ ಸಾಗಿದೆ. ಬೇಸಿಗೆ ಝಳ ಏರುತ್ತಿದ್ದು, ಸೊಪ್ಪು ಬೆಳೆಯುವುದು ಕಷ್ಟಕರವಾಗಿದ್ದು, ಇಳುವರಿ ಕಡಿಮೆಯಾಗಿದೆ. ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿದ್ದು, ಬಹುತೇಕ ಸೊಪ್ಪುಗಳ ದರ ಹಿಂದಿನ ವಾರಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹30–40, ಸಬ್ಬಕ್ಕಿ ಕೆ.ಜಿ ₹40–50, ಮೆಂತ್ಯ ಸೊಪ್ಪು ಕೆ.ಜಿ ₹40–50, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಏರಿಕೆಯಾಗಿದೆ.

ದಾಳಿಂಬೆ, ಕಲ್ಲಂಗಡಿ ಹೆಚ್ಚಳ: ದಾಳಿಂಬೆ ಹಣ್ಣು ಮತ್ತೆ ದುಬಾರಿಯಾಗುತ್ತಿದ್ದು, ಬೇಸಿಗೆಯಲ್ಲಿ ದೇಹ ತಂಪು ಮಾಡಿಕೊಳ್ಳಲು ಹೆಚ್ಚಾಗಿ ಬಳಸುವ ಕಲ್ಲಂಗಡಿ ಹಣ್ಣು ಕೆ.ಜಿ 40ಕ್ಕೆ ಜಿಗಿದಿದೆ. ಉಳಿದಂತೆ ಇತರೆ ಹಣ್ಣುಗಳ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಬೇಲದ ಹಣ್ಣು ಕೆ.ಜಿ ₹80 ಇದೆ.

ಅಡುಗೆ ಎಣ್ಣೆ: ಕಡಲೆಕಾಯಿ ಎಣ್ಣೆ ಅಲ್ಪ ದುಬಾರಿಯಾಗಿದ್ದು, ಉಳಿದ ಎಣ್ಣೆ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಗೋಲ್ಡ್‌ವಿನ್ನರ್ ಕೆ.ಜಿ ₹110, ಪಾಮಾಯಿಲ್ ಕೆ.ಜಿ ₹85–87, ಕಡಲೆಕಾಯಿ ಎಣ್ಣೆ ಕೆ.ಜಿ ₹155–160ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಧಾನ್ಯ: ಉದ್ದಿನ ಬೇಳೆ ಹೊರತುಪಡಿಸಿದರೆ, ತೊಗರಿ ಬೇಳೆ ಸೇರಿದಂತೆ ಇತರೆ ಬೇಳೆ ಧಾರಣೆ ಕೊಂಚ ಕಡಿಮೆಯಾಗಿದೆ. ಕಡಲೆಕಾಳು, ಬಟಾಣಿ ಅಲ್ಪ ಹೆಚ್ಚಳವಾಗಿದೆ. ಗೋಧಿ ಮತ್ತೆ ದುಬಾರಿಯಾಗಿದ್ದು, ಕೆ.ಜಿ ₹50ರ ವರೆಗೂ ಜಿಗಿದಿದೆ.

ಮೆಣಸಿನಕಾಯಿ ಕುಸಿತ: ಬ್ಯಾಡಗಿ ಮೆಣಸಿನ ಕಾಯಿ ದರ ಕೆಲ ವಾರಗಳಿಂದ ಇಳಿಕೆಯತ್ತ ಮುಖ ಮಾಡಿದ್ದು, ಈ ವಾರ ಕೆ.ಜಿಗೆ ₹60 ಕಡಿಮೆಯಾಗಿದೆ. ಧನ್ಯ ಸಹ ಇಳಿಕೆಯತ್ತ ಸಾಗಿದೆ. ಜೀರಿಗೆ, ಲವಂಗ, ಒಣ ದ್ರಾಕ್ಷಿ ಬೆಲೆ ತುಸು ತಗ್ಗಿದೆ.

ಧನ್ಯ ಕೆ.ಜಿ ₹100–150, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹260–300, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹200–220, ಹುಣಸೆಹಣ್ಣು ₹130–160, ಕಾಳುಮೆಣಸು ಕೆ.ಜಿ ₹650–680, ಜೀರಿಗೆ ಕೆ.ಜಿ ₹380–400, ಸಾಸಿವೆ ಕೆ.ಜಿ ₹85–90, ಮೆಂತ್ಯ ಕೆ.ಜಿ ₹90–95, ಚಕ್ಕೆ ಕೆ.ಜಿ ₹250–270, ಲವಂಗ ಕೆ.ಜಿ ₹950–1,000, ಗುಣಮಟ್ಟದ ಗಸಗಸೆ ಕೆ.ಜಿ ₹1,300–1,400, ಬಾದಾಮಿ ಕೆ.ಜಿ ₹620–680, ಗೋಡಂಬಿ ಕೆ.ಜಿ ₹580–650, ಒಣದ್ರಾಕ್ಷಿ ಕೆ.ಜಿ ₹190–200ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಯಥಾಸ್ಥಿತಿ: ಕಳೆದ ವಾರ ಏರಿಕೆ ಕಂಡಿದ್ದ ಕೋಳಿ ಮಾಂಸದ ಬೆಲೆ ಈ ವಾರ ಅದೇ ಸ್ಥಿತಿಯಲ್ಲಿ ಮುಂದುವರಿದಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹140, ರೆಡಿ ಚಿಕನ್ ಕೆ.ಜಿ ₹240, ಸ್ಕಿನ್‌ಲೆಸ್ ಕೆ.ಜಿ ₹260, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹100ಕ್ಕೆ ಸಿಗುತ್ತಿದೆ.

ಮೀನು ಆವಕ ಕಡಿಮೆ: ಸಮುದ್ರ ಮೀನಿನ ಆವಕ ಕಡಿಮೆಯಾಗಿದ್ದು, ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಬಂಗುಡೆ ಕೆ.ಜಿ ₹250, ಬೂತಾಯಿ ಕೆ.ಜಿ ₹200, ಅಂಜಲ್ ಕೆ.ಜಿ ₹960, ಇಂಡಿಯನ್ ಸಾಲ್ಮನ್ ಕೆ.ಜಿ ₹820, ಸೀಗಡಿ ಕೆ.ಜಿ ₹480–720, ಏಡಿ ಕೆ.ಜಿ 650ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.