ತುಮಕೂರು: ಶಿವಕುಮಾರ ಸ್ವಾಮೀಜಿ ಅವರ14 ಅಡಿ ಎತ್ತರದ ಪುತ್ಥಳಿಯನ್ನು ಮುಂದಿನ ತಿಂಗಳು ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ಮುಖ್ಯಮಂತ್ರಿ ಅನಾವರಣ ಮಾಡುವರು. ₹16 ಕೋಟಿ ವೆಚ್ಚದಲ್ಲಿ ಈ ಪುತ್ಥಳಿ ತಯಾರಾಗುತ್ತಿದೆ ಎಂದುಸಚಿವ ಸೋಮಣ್ಣ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂದೇಶ ವಾಚಿಸಿದ ಸೋಮಣ್ಣ, ‘ಸ್ವಾಮೀಜಿ ಇದ್ದಷ್ಟು ದಿನ ತುಮಕೂರು ಜಿಲ್ಲೆ ಅವರ ಹೆಸರಿನ ಮೇಲೆ ನಿಂತಿತ್ತು. ಈಗ ಅವರ ಸ್ಮರಣೆ ಮೇಲೆ ನಿಂತಿದೆ’ ಎಂದು ನುಡಿದರು.

ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ‘ಒಮ್ಮೆ ನಾನು ಮಠಕ್ಕೆ ಭೇಟಿ ನೀಡಿದ್ದೆ ಆಗ ಇಬ್ವರು ಅಣ್ಣ ತಮ್ಮಂದಿರು ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಆಗ ನೋಡಪ್ಪ ಹೀಗಿದೆ ಸ್ಥಿತಿ ನೀವು ಯಾವ ಬಡತನ ನಿವಾರಿಸುತ್ತಿದ್ದೀರಿ ಎಂದು ಸ್ವಾಮೀಜಿ ಪ್ರಶ್ನಿಸಿದ್ದರು ಎಂದು ನೆನಪಿಸಿಕೊಂಡರು.

‘ಶರಣ ಧರ್ಮದಲ್ಲಿ ಭಯ ಇರಬಾರದು. ನಿಜ ಶರಣರು ಭಕ್ತರಾರುತ್ತಾರೆ.ಎಲ್ಲರೂ ಇಂದು ಬಸವಣ್ಣನ ಬಗ್ಗೆ ಮಾತನಾಡುತ್ತಾರೆ. ಆದರೆ ಹಾಗೆ ಬದುಕಲಿಲ್ಲ. ಶಿವಕುಮಾರ ಸ್ವಾಮೀಜಿ ಜಾತಿ ಮತಗಳನ್ನು ಮೀರಿ ಬೆಳೆದರು. ಅವರ ಒಡನಾಟವನ್ನು ನಮ್ಮ ಬದುಕಿನ ಶ್ರೇಷ್ಠ ಕ್ಷಣ ಗಳು ಎಂದುಕೊಳ್ಳಬೇಕು’ಎಂದು ಅಭಿಪ್ರಾಯಪಟ್ಟರು.

ಸಚಿವ ಸಿ.ಟಿ.ರವಿ ಮಾತನಾಡಿ, ‘ರಾಜಕೀಯದಲ್ಲಿ ಜನನಾಯಕರು ಎನಿಸಿಕೊಂಡ ಬಹಳ ಜನ ಜನ ಹಿತಕ್ಕಿಂತ ಸ್ವಜನ ಹಿತಕ್ಕೆ ಆದ್ಯತೆ ನೀಡುತ್ತಿದ್ದಾರೆ.ಹೊರಗಿನ ಶತ್ರು ನಿಗ್ರಹಿಸುವುದು ಸುಲಭ.ಆದರೆ ಒಳಗಿನ ಶತ್ರುಗಳು ನಮ್ಮನ್ನು ಹಾಳು ಮಾಡುತ್ತವೆ’ ಎಂದು ಹೇಳಿದರು.

ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೆ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಸನ್ಮಾನ

ನವದೆಹಲಿಯ ಉದ್ಯಮಿ ಮುಖೇಶ್ ಗರ್ಗ್, ನವದೆಹಲಿಯ ಉಗ್ರ ನಿಗ್ರಹ ದಳದ ಮಣೀಂದ್ರ ಜೀತ್ ಸಿಂಗ್ ಬಿಟ್ಟ ಹಾಗೂ ಬಿಜಿಎಸ್ ಆಸ್ಪತ್ರೆಯ ಡಾ.ರವೀಂದ್ರನಾಥ್ ಅವರನ್ನು ಸನ್ಮಾನಿಸಲಾಯಿತು.

ಮುಖೇಶ್ ಗರ್ಗ್‌ಮೂರು ಅಡಿ ಎತ್ತರದ 50 ಕೆ.ಜಿ ತೂಕದ ಬೆಳ್ಳಿ ಪುತ್ಥಳಿ ಮಾಡಿಸಿಕೊಟ್ಟಿದ್ದಾರೆ. ಮಠದ ದಾಸೋಹಕ್ಕೆ ಪ್ರತಿ ತಿಂಗಳು ₹ 1 ಲಕ್ಷ ದೇಣಿಗೆ ನೀಡುತ್ತಿದ್ದಾರೆ. ಈ ಪುತ್ಥಳಿಯನ್ನು ಇಂದು ಮಠಕ್ಕೆ ಅವರು ನೀಡಿದರು.

ಪಂಜಾಬ್‌ನಮಣೀಂದರ್ ಸಿಂಗ್ ಅವರುಪಿ.ವಿ.ನರಸಿಂಹರಾವ್ ಪ್ರಧಾನಿ ಆಗಿದ್ದಾಗ ರಾಷ್ಟೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಪಂಜಾಬ್‌ನಲ್ಲಿ ಸಚಿವರಾಗಿದ್ದರು. ಮಠದ ಪರಮ ಭಕ್ತರು.

ಆಂಧ್ರಪ್ರದೇಶದ ರವೀಂದ್ರಅವರು.ಅಂಗಾಂಗ ಕಸಿ ತಜ್ಞರು. ಶಿವಕುಮಾರ ಸ್ವಾಮೀಜಿ ಅನಾರೋಗ್ಯಕ್ಕೆ ತುತ್ತಾದ ಸಮಯದಲ್ಲಿ ಚಿಕಿತ್ಸೆ ನೀಡಿದ ಪ್ರಮುಖರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.