ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿ ಅಮ್ಮಸಂದ್ರ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರು ಮತ್ತು ಸದಸ್ಯರು ತಮಟೆ ಚಳವಳಿ ಮೂಲಕ ಕಂದಾಯ ಕಟ್ಟುವಂತೆ ಜಾಗೃತಿ ಮೂಡಿಸಿದರು.

ಸದಸ್ಯ ಸಿದ್ದಗಂಗಯ್ಯ ಮಾತನಾಡಿ, ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸಲು ಅನುದಾನದ ಕೊರತೆ ಕಾಡುತ್ತಿದೆ. ತೆರಿಗೆ ಗ್ರಾಮ ಪಂಚಾಯಿತಿಗೆ ಮೂಲ ಆದಾಯ. ಗ್ರಾಮ ಪಂಚಾಯಿತಿಯಲ್ಲಿ ಶೇ 80ರಷ್ಟು ಕಂದಾಯ ವಸೂಲಿ ಮಾಡಬೇಕು ಎಂಬ ಸರ್ಕಾರದ ಆದೇಶವಿದೆ. ಆದರೆ ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಲಕ್ಷಾಂತರ ರೂಪಾಯಿ ತೆರಿಗೆ ಬಾಕಿ ಇದೆ. ಕಂದಾಯ ಸರಿಯಾಗಿ ವಸೂಲಾತಿಯಾಗದೆ ನೀರು ವಿತರಕರು, ನೌಕರರಿಗೆ ಸಂಬಳ ನೀಡಲಾಗುತ್ತಿಲ್ಲ. ಜನರಿಗೆ ವಿದ್ಯುತ್, ಬೀದಿ ದೀಪ, ಚರಂಡಿ ಸ್ವಚ್ಛತೆಗೆ ಹಣವಿಲ್ಲದೆ ಪರದಾಡುವಂತಾಗಿದೆ ಎಂದು ಹೇಳಿದರು.

ಪಂಚಾಯಿತಿ ವ್ಯಾಪ್ತಿಯ ‘ಹೈಡನ್ ಬರ್ಗ್ ಸಿಮೆಂಟ್ ಕಾರ್ಖಾನೆ’ ಹಲವು ವರ್ಷಗಳಿಂದ ಕಂದಾಯ ಪಾವತಿಸದೆ ಸತಾಯಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಕಂದಾಯ ತೆರಿಗೆ ಕಟ್ಟುವಂತೆ ಹಲವು ಬಾರಿ ನೋಟಿಸ್ ನೀಡಿದರೂ ಕಟ್ಟಿಲ್ಲ. ಸುಮಾರು ₹1 ಕೋಟಿಗೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡಿದೆ. ಕೂಡಲೇ ತೆರಿಗೆ ಕಟ್ಟಬೇಕು ಎಂದು ಕಂದಾಯ ಆಂದೋಲನದಲ್ಲಿ ಸಿಮೆಂಟ್ ಕಾರ್ಖಾನೆ ಮುಂಭಾಗ ತಮಟೆ ಬಾರಿಸಿ ಒತ್ತಾಯಿಸಲಾಯಿತು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ್, ಉಪಾಧ್ಯಕ್ಷ ಪಲ್ಲವಿ, ಸದಸ್ಯರಾದ ಶಿವರಾಜು, ವರಲಕ್ಷ್ಮಿ, ಪವಿತ್ರ, ಸಿದ್ದಗಂಗಮ್ಮ, ಪದ್ಮಾ, ಕಾರ್ಯದರ್ಶಿ ರಾಜಣ್ಣ, ಬಿಲ್ಕಲೆಕ್ಟರ್ ಗುರುಮೂರ್ತಿ, ಸಿಬ್ಬಂದಿ ಶೋಭಾ, ಆಶ್ವಿನಿ, ವಾಟರ್ ಮ್ಯಾನ್ಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.