ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಪಘಾತ: ಮಹಿಳೆ ಸೇರಿ ಇಬ್ಬರು ಸಾವು

Published 24 ಮೇ 2024, 11:25 IST
Last Updated 24 ಮೇ 2024, 11:25 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ (ಮಧುಗಿರಿ): ಹೋಬಳಿಯ ಪುರವರ ಗ್ರಾಮದ ಜಯಮಂಗಲಿ ನದಿ ಸಮೀಪ ಶುಕ್ರವಾರ ಎರಡು ಬೈಕ್‌ಗಳ ಮಧ್ಯೆ ನಡೆದ ಅಪಘಾತದಲ್ಲಿ ಮಹಿಳೆ ಸೇರಿ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಜೊಗೇನಹಳ್ಳಿ ಗ್ರಾಮದ ಹನುಮಕ್ಕ(45), ಉಪ್ಪಾರಹಳ್ಳಿ ಗ್ರಾಮದ ಹನುಮಂತರೆಡ್ಡಿ (65) ಮೃತರು. ಹನುಮಕ್ಕ ಮಗ ಶಾಂತರಾಜು (25), ಮತ್ತೊಂದು ಬೈಕ್‌ನಲ್ಲಿದ್ದ ಗಂಗಾಧರಪ್ಪ(67) ಎಂಬುವವರಿಗೆ ಗಾಯಗಳಾಗಿವೆ. 

ಪುರವರ ಹೋಬಳಿಯ ಕೃಷ್ಣನಯ್ಯನಪಾಳ್ಯದಿಂದ ಜೊಗೇನಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದ ಬೈಕ್‌ ಹಾಗೂ ಕೊಡಿಗೇನಹಳ್ಳಿ ಕಡೆಯಿಂದ ಮಧುಗಿರಿಗೆ ತೆರಳುತ್ತಿದ್ದ ಮತ್ತೊಂದು ಬೈಕ್‌ ಮುಖಾಮುಖಿಯಾಗಿವೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT