ತುಮಕೂರು: ಏರಿಕೆಯತ್ತ ಮುಖ ಮಾಡಿದ್ದ ತರಕಾರಿ, ಸೊಪ್ಪು ಈ ವಾರ ಮತ್ತಷ್ಟು ದುಬಾರಿಯಾಗಿದೆ. ಗಸಗಸೆ, ಗೋಡಂಬಿ ಬೆಲೆ ಹೆಚ್ಚುತ್ತಲೇ ಇದ್ದು, ಕೋಳಿ ಮಾಂಸ ಏರಿಕೆಯಾಗಿದೆ. ಮಾರುಕಟ್ಟೆಗೆ ಸಮುದ್ರದ ಮೀನಿನ ಆವಕ ತೀವ್ರವಾಗಿ ತಗ್ಗಿದೆ.

ಈ ವಾರ ತರಕಾರಿಗಳ ದರ ಹೆಚ್ಚಳವಾಗಿದ್ದು, ಬಹುತೇಕ ಕೆ.ಜಿ ₹50ರ ಗಡಿ ದಾಟಿದೆ. ಗಡ್ಡೆಕೋಸು ಒಮ್ಮೆಲೆ ದುಪ್ಪಟ್ಟಾಗಿದ್ದು, ಕೆ.ಜಿ ₹70–80ಕ್ಕೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಚಿಲ್ಲರೆ ಮಾರಾಟದಲ್ಲಿ ಕೆ.ಜಿ ₹100ರ ವರೆಗೂ ಏರಿಕೆಯಾಗಿದೆ. ಹೂ ಕೋಸು ಇದೇ ದಾರಿಯಲ್ಲಿ ಸಾಗಿದ್ದು, ಒಂದು ₹50ಕ್ಕೆ ತಲುಪಿದೆ. ಬೀನ್ಸ್, ಕ್ಯಾರೇಟ್, ಬೀಟ್ರೂಟ್, ಆಲೂಗಡ್ಡೆ, ಮೂಲಂಗಿ, ಬೆಂಡೆಕಾಯಿ, ಹಾಗಲಕಾಯಿ, ನುಗ್ಗೆಕಾಯಿ, ಹಸಿರು ಮೆಣಸಿನಕಾಯಿ ಹೆಚ್ಚಳವಾಗಿದೆ. ಕ್ಯಾಪ್ಸಿಕಂ ದರ ದುಪ್ಪಟ್ಟಾಗಿದೆ. ಟೊಮೆಟೊ ಬೆಲೆ ಸ್ವಲ್ಪ ಚೇತರಿಸಿಕೊಂಡಿದೆ. ಬೆಳ್ಳುಳ್ಳಿ ಸಹ ಏರಿಕೆಯಾಗಿದೆ.

ಸೊಪ್ಪು ದುಬಾರಿ: ಸೊಪ್ಪಿನ ಧಾರಣೆ ದುಬಾರಿ ಸ್ಥಿತಿಯಲ್ಲೇ ಮುಂದುವರಿದಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹50–60, ಸಬ್ಬಕ್ಕಿ ಸೊಪ್ಪು ಕೆ.ಜಿ ₹70–80, ಮೆಂತ್ಯ ಸೊಪ್ಪು ಕೆ.ಜಿ ₹70–80, ಪಾಲಕ್ ಸೊಪ್ಪು (ಕಟ್ಟು) ₹60ಕ್ಕೆ ಮಾರಾಟವಾಗುತ್ತಿದೆ.

ಹಣ್ಣು: ಕಳೆದ ಕೆಲ ವಾರಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದ್ದ ಹಣ್ಣಿನ ದರ ತುಸು ಏರಿಕೆಯತ್ತ ಸಾಗಿದೆ. ಸೇಬು, ಪಚ್ಚಬಾಳೆ, ದ್ರಾಕ್ಷಿ ಹೆಚ್ಚಳವಾಗಿದ್ದರೆ, ಸೀಬೆ, ಪೈನಾಪಲ್ ಕೊಂಚ ತಗ್ಗಿದೆ.

ಮಾವು ಇಳಿಕೆ: ಮಾರುಕಟ್ಟೆಗೆ ಮಾವಿನ ಹಣ್ಣಿನ ಆವಕ ಹೆಚ್ಚಳವಾಗಿದ್ದು, ಬೆಲೆ ಸಾಕಷ್ಟು ಇಳಿಕೆಯಾಗಿದೆ. ಬಾದಾಮಿ, ಮಲಗೋವಾ ಕೆ.ಜಿ ₹100, ರಸಪುರಿ, ಬೇನಿಶಾ ಕೆ.ಜಿ ₹80–100ಕ್ಕೆ ಇಳಿದಿದೆ. ಆರಂಭದ ದಿನಗಳಲ್ಲಿ ಕೆ.ಜಿ ₹200–250ರ ವರೆಗೂ ಏರಿಕೆಯಾಗಿತ್ತು. ಹಿಂದಿನ ವರ್ಷ ಕೆ.ಜಿ ₹150–200ಕ್ಕೆ ಮಾರಾಟವಾಗಿತ್ತು.

ಅಡುಗೆ ಎಣ್ಣೆ: ಅಡುಗೆ ಎಣ್ಣೆಯ ದರದಲ್ಲಿ ತುಸು ಏರಿಳಿತವಾಗಿದ್ದು, ಪಾಮಾಯಿಲ್ ಅಲ್ಪ ಇಳಿದಿದ್ದರೆ, ಕಡಲೆಕಾಯಿ ಎಣ್ಣೆ ಕೊಂಚ ಏರಿಕೆಯಾಗಿದೆ. ಗೋಲ್ಡ್ವಿನ್ನರ್ ಕೆ.ಜಿ ₹147–150, ಪಾಮಾಯಿಲ್ ಕೆ.ಜಿ ₹115–116, ಕಡಲೆಕಾಯಿ ಎಣ್ಣೆ ಕೆ.ಜಿ ₹160–165ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.

ಬೇಳೆ– ಧಾನ್ಯ: ಬೇಳೆ ಕಾಳುಗಳು, ಧಾನ್ಯಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಕಡಲೆಕಾಳು, ಅಲಸಂದೆ, ಶೇಂಗಾ ತುಸು ಇಳಿದಿದೆ.

ಗಸಗಸೆ ದುಬಾರಿ: ಮಸಾಲೆ ಪದಾರ್ಥಗಳಲ್ಲಿ ಗಸಗಸೆ ಧಾರಣೆ ಗಗನಮುಖಿಯಾಗಿದೆ. ಟರ್ಕಿಯಿಂದ ಆಮದು ಕಡಿಮೆಯಾದ ನಂತರ ಬೆಲೆ ಏರಿಕೆಯತ್ತ ಸಾಗಿದೆ. ಲವಂಗ, ಗೋಡಂಬಿ ಸಹ ಹೆಚ್ಚಳವಾಗಿದೆ.

ಧನ್ಯ ಕೆ.ಜಿ ₹110–115, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹200–210, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹160–180, ಹುಣಸೆಹಣ್ಣು ₹180–200, ಬೆಲ್ಲ ಕೆ.ಜಿ ₹55–60, ಕಾಳುಮೆಣಸು ಕೆ.ಜಿ ₹750–760, ಜೀರಿಗೆ ಕೆ.ಜಿ ₹250–270, ಚಕ್ಕೆ ಕೆ.ಜಿ ₹250–260, ಲವಂಗ ಕೆ.ಜಿ ₹850–870, ಗುಣಮಟ್ಟದ ಗಸಗಸೆ ಕೆ.ಜಿ ₹1,750–1,800, ಏಲಕ್ಕಿ ಕೆ.ಜಿ ₹2,800–3,000, ಬಾದಾಮಿ ಕೆ.ಜಿ ₹780–820, ಗೋಡಂಬಿ ಕೆ.ಜಿ ₹850–900, ಒಣದ್ರಾಕ್ಷಿ ಕೆ.ಜಿ ₹320–340ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಹೆಚ್ಚಳ: ಕೋಳಿ ಮಾಂಸ ಏರಿಕೆಯನ್ನು ಮುಂದುವರಿಸಿದ್ದು, ಈ ವಾರವೂ ಅದೇ ದಾರಿಯಲ್ಲಿ ಸಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹135, ರೆಡಿ ಚಿಕನ್ ಕೆ.ಜಿ ₹220, ಸ್ಕಿನ್ಲೆಸ್ ಕೆ.ಜಿ ₹240, ಮೊಟ್ಟೆಕೋಳಿ (ಫಾರಂ) ಕೆ.ಜಿ ₹135ಕ್ಕೆ ಏರಿಕೆಯಾಗಿದೆ.

ಮೀನು ಬರುತ್ತಿಲ್ಲ: ಮುಂಗಾರು ಸಮಯದಲ್ಲಿ ಸಮುದ್ರದಲ್ಲಿ ಮೀನುಗಾರಿಕೆ ನಿಷೇಧಿಸಿದ್ದು, ಮಾರುಕಟ್ಟೆಯಲ್ಲಿ ಮೀನಿನ ಆವಕ ತಗ್ಗಿದೆ. ಬಂಗುಡೆ ಕೆ.ಜಿ ₹430, ಸಿಲ್ವರ್ ಕೆ.ಜಿ ₹250, ಸೀಗಡಿ ಕೆ.ಜಿ ₹510–780, ಏಡಿ ಕೆ.ಜಿ ₹680ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.