ಸೋಮವಾರ, ಜೂನ್ 21, 2021
28 °C

ವಾಹನ ಡಿಕ್ಕಿ: ಸ್ನೇಹಿತರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ಸಿದ್ಧಾರ್ಥ ಡೆಂಟಲ್ ಕಾಲೇಜು ಸಮೀಪ ಬುಧವಾರ ಬೆಳಿಗ್ಗೆ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರು ಸ್ನೇಹಿತರು ಮೃತಪಟ್ಟಿದ್ದಾರೆ.

ಲುಕ್ಸಾನ್ (20) ಹಾಗೂ ಅಪ್ರೋಜ್ (18) ಮೃತಪಟ್ಟವರು. ಲುಕ್ಸಾನ್ ನಗರದ ಸದಾಶಿವನಗರ ನಿವಾಸಿಯಾಗಿದ್ದು, ತನ್ನ ಸ್ನೇಹಿತ ಹೆಗ್ಗೆರೆ ನಿವಾಸಿ ಅಪ್ರೋಜ್ ಮನೆಗೆ ಪ್ರತಿ ದಿನವೂ ಬೆಳಗಿನ ಜಾವ ತೆರಳಿ ರಂಜಾನ್ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇಂದೂ ಸಹ ಪ್ರಾರ್ಥನೆ ಸಲ್ಲಿಸಿ, ಊಟ ಮುಗಿಸಿ ಮನೆಯಿಂದ ಹೊರಟಿದ್ದಾರೆ. ಸ್ನೇಹಿತನನ್ನು ಬಿಟ್ಟು ಬರಲು ಅಪ್ರೋಜ್ ಬೈಕ್‌ನಲ್ಲಿ ತೆರಳುತ್ತಿದ್ದಾಗ ತುಮಕೂರು ಕಡೆಯಿಂದ ಎದುರಿಗೆ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತ ನಡೆದ ಸಮಯದಲ್ಲಿ ಯಾವೆಲ್ಲ ವಾಹನಗಳು ಈ ಮಾರ್ಗದಲ್ಲಿ ಸಂಚರಿಸಿವೆ ಎಂಬ ಮಾಹಿತಿಯನ್ನು ಸಿ.ಸಿ ಟಿ.ವಿ ಪರಿಶೀಲಿಸಿ ಪೊಲೀಸರು ಕಲೆ ಹಾಕುತ್ತಿದ್ದಾರೆ. ಶೀಘ್ರ ಅಪಘಾತ ಮಾಡಿದ ವಾಹನ ಪತ್ತೆಹಚ್ಚುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು