ತುಮಕೂರು: ಗಾಂಧಿ ಸಹಜ ಬೇಸಾಯ ಶಾಲೆಯ ನೇತೃತ್ವದಲ್ಲಿ ಮಧುಗಿರಿ ತಾಲ್ಲೂಕಿನ ರಂಗಾಪುರ, ಕವಣದಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಾನಯನ ಪ್ರದೇಶ ಅಭಿವೃದ್ಧಿಗೆ ಚಾಲನೆ ನೀಡಲಾಯಿತು.

ರಂಗಾಪುರ ಪಂಚಾಯಿತಿಯ ಬೋರಾಗುಂಟೆ, ಗಿಡದಾಗಲಹಳ್ಳಿ, ರಂಗನಹಳ್ಳಿ ವ್ಯಾಪ್ತಿಯ ರೈತರ ಹೊಲ, ಗದ್ದೆ, ತೋಟಗಳನ್ನು ವೀಕ್ಷಿಸಿದ ಸಹಜ ಕೃಷಿ ವಿಜ್ಞಾನಿ ಎಚ್.ಮಂಜುನಾಥ್, ಬೆಳೆ ವಿನ್ಯಾಸ ಮಾಡಿಕೊಟ್ಟರು.

ಜನರು ಸಾಮೂಹಿಕವಾಗಿ ಪಾಲ್ಗೊಂಡು ಗೋಮಾಳ, ಕಾಡು, ತೊರೆ, ಹಳ್ಳ ಕೊಳ್ಳ, ಕೃಷಿ ಭೂಮಿ ಸರಿಮಾಡಿಕೊಳ್ಳುವ ಮೂಲಕ ಅಂತರ್ಜಲ ಸಂರಕ್ಷಿಸಲು ಶಾಶ್ವತ ಪರಿ
ಹಾರ ಕಂಡುಕೊಳ್ಳಬೇಕು. ಜಲಾನಯನ ಪ್ರದೇಶವನ್ನು ಸಂಪೂರ್ಣ ಚಿಕಿತ್ಸೆ ಮಾಡಲು ಶ್ರಮದಾನ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಗೋಮಾಳ, ದೇವರಕಾಡು, ಗುಂಡು
ತೋಪು, ಕಟ್ಟೆಗಳು ಕುರಿ, ಮೇಕೆ, ನರಿ, ನವಿಲು, ತೋಳ, ಮೊಲಕ್ಕೆ ಆಹಾರ ಒದಗಿಸುತ್ತವೆ. ಗೋಮಾಳದಲ್ಲಿ ಬೆಳೆಯುವ ಹುಲ್ಲು 3ರಿಂದ 4 ಅಡಿ ಉದ್ದ ಬೇರು ಬಿಡುತ್ತದೆ. ಇದರಿಂದ ಮಳೆ ನೀರು ಸರಾಗವಾಗಿ ಭೂಮಿಗೆ ಇಂಗುತ್ತದೆ. ಒಂದು ಎಕರೆಗೆ 30 ಲಕ್ಷ ಲೀಟರ್ ನೀರು ಇಂಗಿಸುವ ಸಾಮರ್ಥ್ಯ ಹುಲ್ಲಿಗಿದೆ. ಹುಲ್ಲು ಬೆಳೆಸಿದರೆ ಅಂತರ್ಜಲದ ಮಟ್ಟ ಹೆಚ್ಚುತ್ತದೆ ಎಂದು ಹೇಳಿದರು.

600ರಿಂದ 700 ಮಿ.ಮೀ ಮಳೆಯಾಗುವ ಈ ಪ್ರದೇಶದಲ್ಲಿ ಮಳೆ ನೀರು ಹಿಡಿದಿಟ್ಟುಕೊಳ್ಳಬೇಕು. ಮಣ್ಣಿನ ಕಾರ್ಬನ್ ಮಟ್ಟ ಹೆಚ್ಚಿಸಿದರೆ ಆಗ ಹಳ್ಳಿಗಳು ಸುಭಿಕ್ಷವಾಗುತ್ತವೆ ಎಂದರು.

ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷ ಬಿ.ಮರುಳಯ್ಯ, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.