ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ವಿಶ್ವ ಹೃದಯ ದಿನ: ಮ್ಯಾರಥಾನ್‌

Published : 29 ಸೆಪ್ಟೆಂಬರ್ 2024, 14:45 IST
Last Updated : 29 ಸೆಪ್ಟೆಂಬರ್ 2024, 14:45 IST
ಫಾಲೋ ಮಾಡಿ
Comments

ತುಮಕೂರು: ವಿಶ್ವ ಹೃದಯ ದಿನದ ಅಂಗವಾಗಿ ಸಿದ್ಧಗಂಗಾ ಆಸ್ಪತ್ರೆಯಿಂದ ನಗರದಲ್ಲಿ ಭಾನುವಾರ ಸಿದ್ಧಗಂಗಾ ಹೆಲ್ತ್‌ರನ್‌ 10ಕೆ ಮ್ಯಾರಥಾನ್‌ ಆಯೋಜಿಸಲಾಗಿತ್ತು.

ಜಿಟಿ ಜಿಟಿ ಮಳೆಯಲ್ಲಿ ಮ್ಯಾರಥಾನ್‌ ನಡೆಯಿತು. 10ಕೆ ಮ್ಯಾರಥಾನ್ ಪುರುಷ ವಿಭಾಗದಲ್ಲಿ ಶಿವಾನಂದ ಚಿಗಾರಿ, ಮಹಿಳೆಯರ ವಿಭಾಗದಲ್ಲಿ ಮೇಘಾಶ್ರೀ ಪದಕ ಪಡೆದರೆ, 5ಕೆ ವಿಭಾಗದಲ್ಲಿ ಗೋಪಿ, ಎಂ.ಮೇಘಾಶ್ರೀ, 50 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ವಿ.ರಾಜಣ್ಣ ಮೊದಲ ಬಹುಮಾನ ಪಡೆದರು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿ, ಮನುಷ್ಯ ಆಚಾರ-ವಿಚಾರ ಜತೆಗೆ ವ್ಯಾಯಾಮ, ಪೌಷ್ಟಿಕ ಆಹಾರ ಕ್ರಮ ರೂಢಿಸಿಕೊಳ್ಳಬೇಕು. ಇತ್ತೀಚೆಗಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ. ದೈಹಿಕ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.

ಒಲಂಪಿಕ್‌ ಕ್ರೀಡಾಪಟು ಅಶ್ವಿನಿ ಅಕ್ಕುಂಜಿ, ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್‌, ಸಿದ್ಧಗಂಗಾ ವೈದ್ಯಕೀಯ ಕಾಲೇಜಿನ ಕಾರ್ಯದರ್ಶಿ ಟಿ.ಎಂ.ಸ್ವಾಮಿ, ಪ್ರಾಂಶುಪಾಲರಾದ ಡಾ.ಶಾಲಿನಿ, ವೈದ್ಯಕೀಯ ಆಧೀಕ್ಷಕ ಡಾ.ನಿರಂಜನಮೂರ್ತಿ, ವೈದ್ಯರಾದ ಭಾನುಪ್ರಕಾಶ್, ಡಾ.ಶರತ್ ಕುಮಾರ್, ಡಾ.ನಿಲೇಶ್ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT