ಮಧುಗಿರಿ: ಕೈವಾರ ಯೋಗಿ ನಾರೇಯಣ ಜಯಂತಿಯನ್ನು ಮಾರ್ಚ್ 7ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಾಲ್ಲೂಕು ಬಲಿಜ ಸಂಘದ ಅಧ್ಯಕ್ಷ ಎಂ.ಎಸ್. ಶಂಕರನಾರಾಯಣ
ತಿಳಿಸಿದರು.

ಪಟ್ಟಣದ ಎಂ.ಎಸ್. ರಾಮಯ್ಯ ಸಮುದಾಯ ಭವನದಲ್ಲಿ ತಾಲ್ಲೂಕು ಬಲಿಜ ಸಂಘದಿಂದ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

7ರಂದು ಬೆಳಿಗ್ಗೆ 10.30ಕ್ಕೆ ಕೈವಾರ ಯೋಗಿ ನಾರೇಯಣ ತಾತಯ್ಯ ಭಾವಚಿತ್ರದೊಂದಿಗೆ ಮಲ್ಲೇಶ್ವರ ಸ್ವಾಮಿ ದೇವಾಲಯ ಮುಂಭಾಗದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೂರ್ಣಕುಂಭ, ವಾದ್ಯಗಳೊಂದಿಗೆ ಅದ್ದೂರಿ ಮೆರವಣಿಗೆ ನಡೆಸಲಾಗುವುದು ಎಂದರು.

ಎಂ.ಎಸ್. ರಾಮಯ್ಯ ಭವನದಲ್ಲಿ ಕೈವಾರ ತಾತಯ್ಯ ಕೀರ್ತನೆ, ತಾಲ್ಲೂಕಿನ ಬಲಿಜ ಸಮುದಾಯದ ಎಸ್ಸೆಸ್ಸೆಲ್ಸಿ, ಪಿಯು ಹಾಗೂ ಉನ್ನತ ಶಿಕ್ಷಣದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿ
ದರು.

ತಾಲ್ಲೂಕು ಬಲಿಜ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ವೆಂಕಟರಾಮು, ಖಜಾಂಚಿ ಆರ್.ಎಲ್.ಎಸ್. ರಮೇಶ್, ಮುಖಂಡರಾದ ವೇಣುಗೋಪಾಲ್, ಶ್ರೀನಿವಾಸ್, ಲಕ್ಷ್ಮೀನಾರಾಯಣ, ಎಂ.ಎಸ್.ಆರ್.ಬಿ. ಕುಮಾರ್, ಸೀಬಿ ನರಸಿಂಹಯ್ಯ, ಚಲಪತಿ, ರಾಘವೇಂದ್ರ, ನಾರಾಯಣಪ್ಪ, ಹರಿಹರಮೂರ್ತಿ, ದೋಲಿ ಬಾಬು, ನರಸಿಂಹಮೂರ್ತಿ ಹಾಗೂ ಸಮುದಾಯದ ಮಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.