ಶುಕ್ರವಾರ, ಏಪ್ರಿಲ್ 10, 2020
19 °C

ದೀಪಾವಳಿಯಂದೇ ಈ ಮನೆಯಲ್ಲಿ ಆರಿತು ಬೆಳಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾ(ತುಮಕೂರು): ದೀಪಾವಳಿ ಹಬ್ಬದ ಪ್ರಯುಕ್ತ ಎಮ್ಮೆ ಮತ್ತು ಬೈಕ್ ತೊಳೆಯಲು ಹೋಗಿದ್ದ ಯಲಪೇನಹಳ್ಳಿಯ ಯೋಗೇಶ್(15) ಮತ್ತು ಸಿದ್ದೇಶ್(11) ಎಂಬ ಬಾಲಕರು ಕೆರೆಯಲ್ಲಿ ಮುಳುಗಿ  ಮೃತಪಟ್ಟಿದ್ದಾರೆ.

ಇಂದು ಬೆಳಿಗ್ಗೆ ಕೆರೆಯಲ್ಲಿ ಎಮ್ಮೆಯ ಮೈ ತೊಳೆಯುವಾಗ, ಅದು ಇವರಿಬ್ಬರನ್ನು ಎಳೆದುಕೊಂಡು ಆಳವಿರುವ ಕಡೆಗೆ ಹೋಗಿದೆ. ಅದನ್ನು ದಡಕ್ಕೆ ಎಳೆದು ತರುವ ಪ್ರಯತ್ನವನ್ನು ಈ ಅಣ್ಣ-ತಮ್ಮಂದಿರು ಮಾಡಿದ್ದಾರೆ. ಆದರೆ ಆ ಪ್ರಯತ್ನ ಫಲಿಸಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ದೊಡ್ಡಪ್ಪ - ಚಿಕ್ಕಪ್ಪನ ಮಕ್ಕಳಾದ ಇವರನ್ನು ಕಳೆದುಕೊಂಡ ಕುಟುಂಬದ ಸದಸ್ಯರು ದುಃಖದ ಮಡುವಿನಲ್ಲಿ ಮುಳುಗಿದ್ದಾರೆ. ಪಟ್ಟನಾಯಕನಹಳ್ಳಿ ಪೊಲೀಸರು ಮಹಜರು ಕಾರ್ಯ ನಡೆಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)