ತುಮಕೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಯಲ್ಲಿ ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿ ಬೂದಿಬೆಟ್ಟ ಗ್ರಾ.ಪಂ.ನಲ್ಲಿ ಭಾರೀ ಗೋಲ್ಮಾಲ್ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಬೆಚ್ಚಿಬೀಳಿಸುವಂತಿದೆ.

ಗ್ರಾ.ಪಂ. ಅಧ್ಯಕ್ಷರು, ಪಿಡಿಒ, ತಾ.ಪಂ. ಇಒ, ತಾ.ಪಂ. ಎಂಜಿನಿಯರ್, ಗುತ್ತಿಗೆದಾರರು ಶಾಮೀಲಾಗಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಇದೀಗ ಪ್ರಕರಣ ಲೋಕಾಯುಕ್ತರ ಕೈ ಸೇರಿದೆ. ಈ ಸಂಬಂಧ ಇದೇ ಗ್ರಾಮದ ಎನ್.ನಾಗರಾಜ್ ಎಂಬುವರು ಫೆಬ್ರುವರಿ ತಿಂಗಳಲ್ಲೆ ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ಸಹ ನೀಡಿದ್ದಾರೆ.

ಕಾಮಗಾರಿಗಾಗಿ ಸಾಮಗ್ರಿ ಸರಬರಾಜು ಪೂರೈಕೆ ಮಾಡಿರುವುದಾಗಿ ಬಿಲ್ ಮಾಡಿಸಿಕೊಂಡು ಹಣ ಲಪಟಾಯಿಸಲಾಗಿದೆ. ಅಚ್ಚರಿಯೆಂದರೆ; ಗುತ್ತಿಗೆದಾರರೊಬ್ಬರಿಗೆ ನೀಡಲಾದ ಉದ್ಯೋಗ ಖಾತರಿ ಹಣದ ಚೆಕ್ಅನ್ನು ಗ್ರಾ.ಪಂ. ಅಧ್ಯಕ್ಷರ ಪುತ್ರನೆ ಖೊಟ್ಟಿ ಹೆಸರಿನಲ್ಲಿ ನಗದು ಮಾಡಿಸಿಕೊಂಡಿರುವ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಬೂದಿಬೆಟ್ಟ ಗ್ರಾ.ಪಂ.ನ ಸಾರವಾಟಪುರ ಗ್ರಾಮಕ್ಕೆ ಸೇರಿದ ಎತ್ತಿನಹಳ್ಳಿ ಸಮೀಪ ಉದ್ಯೋಗ ಖಾತ್ರಿ ಯೋಜನೆಯಡಿ ಚೆಕ್ಡ್ಯಾಂ ನಿರ್ಮಾಣಕ್ಕಾಗಿ ಸಾಮಗ್ರಿ ಸರಬರಾಜು ವೆಚ್ಚವಾಗಿ ರೂ. 3,32074 ಲಕ್ಷ ಬಿಡುಡಗೆ ಮಾಡಲಾಗಿದೆ. ಆದರೆ ಸಾಮಗ್ರಿ ಸರಬರಾಜು ಮಾಡದೇ ಹಣ ಬಿಡುಗಡೆ ಮಾಡಿದ್ದು, ಇದರಲ್ಲಿ ಗ್ರಾ.ಪಂ. ಕಾರ್ಯದರ್ಶಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಎಂಜಿನಿಯರ್, ಗುತ್ತಿಗೆದಾರ ಶಾಮೀಲಾಗಿದ್ದಾರೆ ಎನ್ನಲಾಗಿದೆ.

ವಿಪರ್ಯಾಸ ಎಂದರೆ, ರೂ. 3,32074 ಮೊತ್ತದ ಚೆಕ್ಅನ್ನು ಗುತ್ತಿಗೆದಾರ ರಘುರಾಂ ಎಂಬುವವರ ಹೆಸರಿಗೆ ಕೊಡಲಾಗಿದೆ. ಆದರೆ ಈ ಚೆಕ್ಗೆ ಗ್ರಾ.ಪಂ. ಅಧ್ಯಕ್ಷೆ ಜಯಮ್ಮ ಅವರ ಸಹಿ ಬೇಕಾದ ಕಾರಣ ತಾಯಿಯ ಸಹಿ ಹಾಕಿಸಿಕೊಡುವುದಾಗಿ ಗುತ್ತಿಗೆದಾರರಿಂದ ಚೆಕ್ ಪಡೆದ ಅಧ್ಯಕ್ಷೆ ಪುತ್ರ ರಮೇಶ್ಬಾಬು ಬ್ಯಾಂಕಿನಲ್ಲಿ ಗುತ್ತಿಗೆದಾರನ ಹೆಸರಿನಲ್ಲಿ ತನ್ನದೇ ಖಾತೆ ತೆರೆದು ಹಣ ಲಪಟಾಯಿಸಿದ್ದಾರೆ.

ವೈ.ಎನ್.ಹೊಸಕೋಟೆ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ರಘುರಾಂ ಎಂದು ಹೇಳಿಕೊಂಡು ರಮೇಶ್ಬಾಬು ಖಾತೆ ತೆರೆದಿದ್ದಾರೆ (ಖಾತೆ ಸಂಖ್ಯೆ 377). ಪಾವಗಡದ ಕಲ್ಪತರು ಕಾವೇರಿ ಗ್ರಾಮೀಣ ಬ್ಯಾಂಕ್ನ ಉದ್ಯೋಗ ಖಾತ್ರಿಯ ಚೆಕ್ಅನ್ನು (ನಂ-814432) ಡಿಸಿಸಿ ಬ್ಯಾಂಕ್ನ ತನ್ನ ಖಾತೆ ಮೂಲಕ ನಗದು ಮಾಡಿಸಿಕೊಂಡಿದ್ದಾರೆ.

ಇದು ಗುತ್ತಿಗೆದಾರ ರಘುರಾಂ ಅವರಿಗೆ ಗೊತ್ತಾಗಿ ದೂರು ತಾ.ಪಂ. ಇಒ ಕಚೇರಿ ಮೆಟ್ಟಿಲು ಹತ್ತಿದೆ.ತಾ.ಪಂ.ಕಾರ್ಯನಿರ್ವಣಾಧಿಕಾರಿ ದೂರಿನ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವ ಬದಲಿಗೆ ಇಬ್ಬರ ನಡುವೆಯೂ ರಾಜಿ ಮಾಡಿಸಿ ಈಗ ಕಾನೂನಿನ ಕುಣಿಕೆಗೆ ಸಿಲುಕಿ ಬಿದ್ದಿದ್ದಾರೆ.

ಲೋಕಾಯುಕ್ತರು ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ. ಒಟ್ಟಾರೆ ಈ ಪ್ರಕರಣದಲ್ಲಿ ಎಂಟು ಮಂದಿ ಶಾಮೀಲಾಗಿದ್ದಾರೆ ಎನ್ನಲಾಗಿದ್ದು, ತನಿಖೆಯಿಂದಷ್ಟೆ ಎಲ್ಲವೂ ಹೊರಬರಬೇಕಾಗಿದೆ.

ಜಾಬ್ ಕಾರ್ಡ್: ಮತ್ತೊಂದು ಅಚ್ಚರಿ ಎಂದರೆ; ಗ್ರಾಮದ ಮತದಾರರ ಪಟ್ಟಿಯಲ್ಲಿ 274 ಮಂದಿ ಇದ್ದಾರೆ.ಆದರೆ ಗ್ರಾ.ಪಂ. ನೀಡಿರುವ ದಾಖಲೆ ಪ್ರಕಾರ 700ಕ್ಕೂ ಹೆಚ್ಚು ಜನರಿಗೆ ಜಾಬ್ ಕಾರ್ಡ್ ಕೊಡಲಾಗಿದೆ.

ಅಂದರೆ ಗ್ರಾಮದಲ್ಲಿ ವಾಸ ಇರುವವರು, ಇಲ್ಲದವರಿಗೂ ಕಾರ್ಡ್ ವಿತರಣೆ ಮಾಡಲಾಗಿದೆ. ಈ ರೀತಿ ಹೆಚ್ಚುವರಿ ಕಾರ್ಡ್ಗಳನ್ನು ಸೃಷ್ಟಿಸಿ, ಜನರಿಗೆ ಕೆಲಸ ನೀಡಲಾಗಿದೆ ಎಂದು ತೋರಿಸಿ ಬಿಲ್ ಮಾಡಿಕೊಳ್ಳಲಾಗುತ್ತಿದೆ ಎಂದು ಮುಖಂಡರೊಬ್ಬರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.