ತುಮಕೂರು: `ಯಾವ ಮಹೋನ್ನತ ಉದ್ದೇಶಕ್ಕಾಗಿ ದೇಶ ಸ್ವಾತಂತ್ರ್ಯ ಪಡೆಯಿ ತೋ, ಆ ಉದ್ದೇಶಗಳು ಇಂದಿಗೂ ಕನಸಾಗಿಯೇ ಉಳಿದಿರುವುದು ಅತ್ಯಂತ ದುರದೃಷ್ಟಕರ~ ಎಂದು ಅಲ್ ಅಮೀನ್ ಸಂಘಟನೆ ಸ್ಥಾಪಕ ಡಾ.ಮುಮ್ತಾಜ್ ಅಹ್ಮದ್ ಖಾನ್ ಇಲ್ಲಿ ಸೋಮವಾರ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯ ದಲ್ಲಿ ನಡೆದ `ಆಧುನಿಕ ಭಾರತದಲ್ಲಿ ಯುವ ಜನತೆ ಭವಿಷ್ಯ~ ಕುರಿತು ಉಪ ನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿನ ವ್ಯಾಪಕ ಭ್ರಷ್ಟಾಚಾರದಿಂದ ಪ್ರಗತಿ ಅಷ್ಟಾಗಿ ಆಗುತ್ತಿಲ್ಲ. ನಮಗಿಂತ ತಡವಾಗಿ ಸ್ವಾತಂತ್ರ್ಯ ಪಡೆದ ರಾಷ್ಟ್ರಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ. ಅದಕ್ಕೆ ಆಫ್ರಿಕಾ ಖಂಡವೇ ನಿದರ್ಶನ. ಇಲ್ಲಿಯೂ ಬದಲಾವಣೆ ಗಾಳಿ ಬೀಸುತ್ತಿದೆ. ಆದರೆ ಭಾರತದಲ್ಲಿ ಮಾತ್ರ ಭ್ರಷ್ಟಾಚಾರ ಎಂಬ ವಿಷ ಎಲ್ಲಕ್ಕೂ ಕಂಠಕವಾಗಿದೆ ಎಂದು ವಿಷಾದಿಸಿದರು.

ದೇಶಾಭಿಮಾನ, ಜಾಗೃತಿ ಕೊರತೆ ಯಿಂದ ದೇಶ ಸಂಕಷ್ಟ ಅನುಭವಿಸು ತ್ತಿದೆ. ಭೌಗೋಳಿಕವಾಗಿ ಶ್ರೀಮಂತ ವಲ್ಲದ ದೇಶಗಳು ಹಲವು ಸಾಧನೆ ಗಳನ್ನು ಮಾಡುತ್ತಿವೆ. ಇನ್ನೊಂದೆಡೆ ಪ್ರತಿಭಾವಂತರು ದೇಶದ ಅಭಿವೃದ್ಧಿಗೆ ಬಳಕೆಯಾಗುವ ಬದಲು ಹೊರ ದೇಶಕ್ಕೆ ವಲಸೆ ಹೋಗುತ್ತಿದ್ದಾರೆ. ಇದಕ್ಕೆ ದೇಶಭಿಮಾನದ ಕೊರತೆಯೇ ಕಾರಣ ಎಂದು ಹೇಳಿದರು.

`ತಮ್ಮ ದೇಶದಲ್ಲೇ ಜನರು ಗುಲಾಮ ರಾಗಿ ಬದುಕುವುದು ಅತ್ಯಂತ ಹೇಯ ವಾದದ್ದು. ಭ್ರಷ್ಟಾಚಾರದಿಂದ ಸಿಕ್ಕ ಸ್ವಾತಂತ್ರ್ಯ ಅರ್ಥ ಕಳೆದುಕೊಂಡಿದೆ. ಭ್ರಷ್ಟರಾಗುವ ಮೊದಲು ದೇಶದ ಬಗ್ಗೆ ಯೋಚಿಸಬೇಕು. ಇಡೀ ಜಗತ್ತಿಗೆ ಮಾದರಿ ಸ್ವಾತಂತ್ರ್ಯ ಚಳವಳಿ ತೋರಿಸಿ ಕೊಟ್ಟ ದೇಶವು ಅಧೋಗತಿಗೆ ಇಳಿದಿದೆ. ಮತ್ತೊಮ್ಮೆ ದೇಶದ ವೈಭವ ಮರಳಿ ತರಲು ಪ್ರತಿಯೊಬ್ಬರು ಶ್ರಮಿಸಬೇಕು~ ಎಂದು ತಿಳಿಸಿದರು.

ಮಾಜಿ ಶಾಸಕ ಷಫೀಅಹ್ಮದ್ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳು ಶೈಕ್ಷಣಿಕ ವಲಯದಲ್ಲಿ ಸಿಗುವ ಸೌಲಭ್ಯ ಗಳನ್ನು ಸದುಪಯೋಗ ಪಡಿಸಿಕೊಳ್ಳ ಬೇಕು ಎಂದರು.ಕುಲಪತಿ ಪ್ರೊ.ಎಸ್.ಸಿ.ಶರ್ಮಾ ಪ್ರಾಸ್ತಾವಿಕ ಮಾತನಾಡಿದರು. ಕುಲಸಚಿವ ಪ್ರೊ.ಡಿ.ಶಿವಲಿಂಗಯ್ಯ, ಡಾ.ಎಂ. ಜಯರಾಮು ಮತ್ತಿತರರು ಹಾಜರಿದ್ದರು.

ನಾಳೆಯಿಂದ ಕಾನೂನು ಸಾಕ್ಷರತಾ ರಥ ಸಂಚಾರ
ಮಧುಗಿರಿ: ನ್ಯಾಯಾಲಯಗಳಲ್ಲಿರುವ ಪ್ರಕರಣಗಳನ್ನು ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯ ಮುಖಾಂತರ ತಾಲ್ಲೂ ಕಿನ ವಿವಿಧ ಗ್ರಾಮಗಳಲ್ಲಿ ರಾಜಿ ಮೂಲಕ ಇತ್ಯರ್ಥ ಪಡಿಸಲು ಮಾ. 14ರಿಂದ 16ರವರೆಗೆ ಹಮ್ಮಿಕೊಳ್ಳ ಲಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಡಿ.ಟಿ.ದೇವೆಂದ್ರನ್ ತಿಳಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ. 14 ರಂದು ಬಿಜವಾರ, ಮೈದನಹಳ್ಳಿ ಮತ್ತು ಸಿಂಗನಹಳ್ಳಿ, ಮಾ. 15ರಂದು ಚಿನಕ ವಜ್ರ, ನಲ್ಲೇಕಾಮನಹಳ್ಳಿ ಮತ್ತು ಹನುಮಂತಪುರ, ಮಾ. 16ರಂದು ಸಿದ್ದಾಪುರ, ಚಿಕ್ಕಮಾಲೂರು, ಕೊಡಿ ಗೇನಹಳ್ಳಿ ಗ್ರಾಮಗಳಲ್ಲಿ ಏರ್ಪಡಿಸಲಾಗಿದೆ.

ಗ್ರಾಮಸ್ಧರು ನ್ಯಾಯಾಲಯಗಳಲ್ಲಿ ಬಾಕಿ ಇರುವ ತಮ್ಮ ವ್ಯಾಜ್ಯಗಳನ್ನು ಸ್ಧಳದಲ್ಲಿಯೇ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಇಚ್ಚೆ ಇದ್ದಲ್ಲಿ ಮುಂಚಿತವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಬಹುದೆಂದು ತಿಳಿಸಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಸಮಿತಿ ಸದಸ್ಯ ಕಾರ್ಯದರ್ಶಿ ಆನಂದ ಪಿ.ಚೌವ್ಹಾಣ್ ಉಪಸ್ಧಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.