ಸೋಂಕಿತ ರಾತ್ರಿ ಊಟ ಮಾಡಿದ್ದ ಹಾಗೂ ಉಳಿದುಕೊಂಡಿದ್ದ ತೆಕ್ಕಟ್ಟೆಯ ಪೆಟ್ರೋಲ್ ಬಂಕ್ ಅನ್ನು ಮುಚ್ಚಲಾಗಿದ್ದು, ಅದರ ಮಾಲೀಕ ಹಾಗೂ ಸಿಬ್ಬಂದಿಯನ್ನು ಕ್ವಾರಂಟೈನ್ನಲ್ಲಿಡಲಾಗಿದೆ. ಹಾಗೆಯೇ, ಸಾಸ್ತಾನ ಟೋಲ್ ಸಿಬ್ಬಂದಿಯನ್ನೂ ಕ್ವಾರಂಟೈನ್ನಲ್ಲಿಡಲಾಗಿದ್ದು, ಸೋಂಕಿತನ ಸಂಪರ್ಕಕ್ಕೆ ಬಂದ ಎಲ್ಲರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.