ಉಡುಪಿ: ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷ ಪ್ರಭಾಕರ ಪೂಜಾರಿ ನೇತೃತ್ವದಲ್ಲಿ ಆಟಿ ಅಮಾವಾಸ್ಯೆ ಪ್ರಯುಕ್ತ ಸಾರ್ವಜನಿಕರಿಗೆ ಪಾಲೆಮರದ ತೊಗಟೆ ಕಷಾಯ (ಆಟಿ ಕಷಾಯ) ವಿತರಣೆ ಗುರುವಾರ ನಗರದ ಸರ್ವಿಸ್ ಬಸ್ ನಿಲ್ದಾಣ ಬಳಿಯ ಕ್ಲಾಕ್ ಟವರ್ ಮುಂಭಾಗದಲ್ಲಿ ನಡೆಯಿತು.

ಉದ್ಯಮಿ ಜೇಸನ್ ಡಯಾಸ್, ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಅನಿಲ್ ಪೂಜಾರಿ ಮತ್ತು ಸಾಬೂದ್ದೀನ್, ಪ್ರಧಾನ ಸಂಚಾಲಕ ಕಿರಣ್ ಪಿಂಟೋ, ಜೊತೆ ಕಾರ್ಯದರ್ಶಿ ಮಜೀದ್, ಜಿಲ್ಲಾ ಮಹಿಳಾ ಘಟಕದ ಜಯಶ್ರೀ ಸುವರ್ಣ, ಸದಸ್ಯರಾದ ಅಜರುದ್ದೀನ್, ನಾಗಲಕ್ಷ್ಮಿ, ಪೂರ್ಣಿಮಾ ಉಪಸ್ಥಿತರಿದ್ದರು.

ಉಚಿತ ವಿತರಣೆ

ಕಾಪು (ಪಡುಬಿದ್ರಿ): ಆಟಿ ಅಮಾವಾಸ್ಯೆಯ ಪ್ರಯುಕ್ತ ಹಾಲೆ ಮರದ ತೊಗಟೆಯಿಂದ ಮಾಡಿದ ಕಷಾಯವನ್ನು ಮೂಳೂರಿನ ಸರ್ಕಾರಿ ಸಂಯುಕ್ತ ಶಾಲೆಯಲ್ಲಿ ಉಚಿತವಾಗಿ ವಿತರಿಸಲಾಯಿತು.

ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್ ಮೂಳೂರು, ಟ್ರಸ್ಟ್ ಸದಸ್ಯರು ಹಾಗೂ ಸಂಜೀವ ಆರ್ ಅಮೀನ್ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸತತ 10ನೇ ವರ್ಷ ಹಾಲೆ ಮರದ ತೊಗಟೆಯಿಂದ ಮಾಡಿದ ಕಷಾಯವನ್ನು ಉಚಿತವಾಗಿ ವಿತರಿಸಲಾಯಿತು. ಸುಮಾರು 850 ಜನರು ಪ್ರಯೋಜನ ಪಡೆದರು.

ಟ್ರಸ್ಟಿ ಪ್ರತೀಕ್ ಸುವರ್ಣ, ನಾಗೇಶ್ ಅಮೀನ್, ಪ್ರಧಾನ ಕಾರ್ಯದರ್ಶಿ ಧೀರೇಶ್ ಡಿ.ಪಿ , ಸದಸ್ಯರಾದ ದಿನೇಶ್ ಪಾಣರ, ಸುನಿಲ್ ಕರ್ಕೇರ, ಕಾರ್ತಿಕ್ ಸುವರ್ಣ, ಗಗನ್ ಮೆಂಡನ್, ಹವ್ಯಾಸ್ ಪೂಜಾರಿ, ಅವೀಶ್ ಅಂಚನ್, ಶಲಿನ್ ಅಂಚನ್, ತನೀಶ್ ಎಸ್ ಪೂಜಾರಿ, ಪ್ರಜೇಶ್, ಗುರುರಾಜ್ ಪೂಜಾರಿ, ಮನ್ವಿತ್ ಕರ್ಕೇರ, ಜಯೇಶ್ ಸಾಲ್ಯನ್ ಇದ್ದರು.

ಬಿರುವೆರ್ ಕಾಪು ಸೇವಾ ಸಮಿತಿ ವತಿಯಿಂದ ಕಾಪುಪೇಟೆಯಲ್ಲಿ ಹಾಲೆ ಮರದ ತೊಗಟೆಯ ಕಷಾಯ ಮತ್ತು ಮೆಂತೆ ಗಂಜಿಯನ್ನು ವಿತರಿಸಲಾಯಿತು.

ಕಾಪು, ಇನ್ನಂಜೆ, ಮಡುಂಬು, ಮಲ್ಲಾರು, ಬೆಳಪು ಮೊದಲಾದ ಕಡೆಗಳಲ್ಲಿ ಹಾಲೆ ಮರದ ತೊಗಟೆಯನ್ನು ಸಂಗ್ರಹಿಸಿ, ಸಾಂಪ್ರದಾಯಿಕ ಶೈಲಿಯಲ್ಲಿ ಸುಮಾರು 100 ಲೀಟರ್ನಷ್ಟು ಆಟಿದ ಕಷಾಯವನ್ನು ಸಿದ್ಧಪಡಿಸಿ ಸರ್ವಧರ್ಮೀಯರಿಗೆ ವಿತರಿಸಲಾಯಿತು. 1,000ಕ್ಕೂ ಅಧಿಕ ಮಂದಿ ಕಷಾಯ ಸ್ವೀಕರಿಸಿದರು.

ಬಿರುವೆರ್ ಕಾಪು ಸೇವಾ ಸಮಿತಿಯ ಜತೆ ಕಾರ್ಯದರ್ಶಿ ಅತಿಥ್ ಸುವರ್ಣ ಪಾಲಮೆ, ಸಮಿತಿ ಗೌರವಾಧ್ಯಕ್ಷ ಭಾಸ್ಕರ್ ಅಂಚನ್, ಉಪಾಧ್ಯಕ್ಷ ಸುಧಾಕರ ಸಾಲ್ಯಾನ್, ಸದಸ್ಯರಾದ ವಿಕ್ಕಿ ಪೂಜಾರಿ ಮಡುಂಬು, ಪ್ರಶಾಂತ್ ಪೂಜಾರಿ, ರಾಕೇಶ್ ಕುಂಜೂರು, ಸುಜನ್ ಎಲ್. ಸುವರ್ಣ, ಅನಿಲ್ ಅಮೀನ್ ಕಾಪು, ದೇವಿಪ್ರಸಾದ್ ಶಿರ್ವ, ರವಿರಾಜ್ ಇನ್ನಂಜೆ, ವರುಣ್ ಕೋಟ್ಯಾನ್, ಅಶ್ವಿನಿ ನವೀನ್, ಸಂಧ್ಯ ಬಿ. ಕೋಟ್ಯಾನ್ ಪಾಲ್ಗೊಂಡಿದ್ದರು.

ಪಲಿಮಾರಿನಲ್ಲೂ ವಿತರಣೆ

ಪಲಿಮಾರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಯಾರಿಸಿದ ಕಷಾಯವನ್ನು 1000ಕ್ಕೂ ಹೆಚ್ಚು ಜನರಿಗೆ ಹಂಚಲಾಯಿತು. ಪ್ರಧಾನ ಅರ್ಚಕ ಶ್ರೀನಿವಾಸ ಉಡುಪ ಶರತ್ ಉಡುಪ ಹೊಯಿಗೆ ಫ್ರೆಂಡ್ಸ್ ಸಂಸ್ಥೆಯ ಅಧ್ಯಕ್ಷ ರಿತೇಶ್ ದೇವಾಡಿಗ ಸಂತೋಷ್ ದೇವಾಡಿಗ ಸತೀಶ ಕುಮಾರ್ ರಾಘವೇಂದ್ರ ಸುವರ್ಣ ಲಕ್ಷ್ಮಣ್ ಕೋಟ್ಯಾನ್ ಅರುಣ್ ಪೂಜಾರಿ ರೋಷನ್ ಶ್ರೀಜಿತ್ ಅಂಕಿತ್ ಸಂಪತ್ ಪುರುಷೋತ್ತಮ ವಿಜಯ್ ಮಧುಕರ್ ಅಮೀನ್ ಇದ್ದರು. ಪಡುಬಿದ್ರಿ ಮಾರ್ಕೆಟ್ ಬಳಿ ಆಟಿ ಕಷಾಯವನ್ನು ಪಡುಬಿದ್ರಿ ಮೂರ್ತೆದಾರರ ಸಂಘದ ಅಧ್ಯಕ್ಷ ಪಿ. ಕೆ. ಸದಾನಂದ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.