ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ನಾಟಿ ಮಾಡಿ ಟ್ರ್ಯಾಕ್ಟರ್ ಓಡಿಸಿದ ಕೃಷಿ ಸಚಿವ ಬಿ.ಸಿ. ಪಾಟೀಲ್‌

Last Updated 26 ಜೂನ್ 2021, 13:27 IST
ಅಕ್ಷರ ಗಾತ್ರ

ಉಡುಪಿ: ತಾಲ್ಲೂಕಿನ ಕಡೆಕಾರಿನಲ್ಲಿ ಶನಿವಾರ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಭತ್ತದ ಗದ್ದೆಗಿಳಿದು ನಾಟಿ ಮಾಡಿದರು. ಕೆಸರು ಗದ್ದೆಯಲ್ಲಿ ಟ್ರಾಕ್ಟರ್‌ ಓಡಿಸಿದರು. ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ಕೇದಾರೋತ್ಥಾನ ಟ್ರಸ್ಟ್‌ನಿಂದ ತಾಲ್ಲೂಕಿನಾದ್ಯಂತ ಹಡಿಲುಭೂಮಿ ಕೃಷಿ ಆಂದೋಲನ ನಡೆಯುತ್ತಿದ್ದು, ಸಚಿವ ಬಿ.ಸಿ.ಪಾಟೀಲ್ ಕೂಡ ನಾಟಿ ಕಾರ್ಯದಲ್ಲಿ ಭಾಗವಹಿಸಿ ಅಭಿಯಾನಕ್ಕೆ ಕೈಜೋಡಿಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಚಿವರು, ‘ನನಗೆ ಕೃಷಿ ಹೊಸದಲ್ಲ, ನಾನೂ ರೈತನ ಮಗನೇ. ರಂಟೆ ಹೊಡೆದಿದ್ದೇನೆ, ಸಲಕೆ ಹಿಡಿದು ಕೆಲಸ ಮಾಡಿದ್ದೇನೆ, ನಾಟಿ ಮಾಡಿದ್ದೇನೆ. ಪೊಲೀಸ್ ಅಧಿಕಾರಿ ಹಾಗೂ ನಟನಾದ ಬಳಿಕ ಕೃಷಿ ಕಾರ್ಯ ಮರೆತುಹೋದಂತಾಗಿತ್ತು. ಈಗ ಮತ್ತೆ ಹಳೆ ನೆನಪುಗಳು ಮರುಕಳಿಸಿದಂತಾಯಿತು’ ಎಂದರು.

ಕೋವಿಡ್‌ನಿಂದಾಗಿ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮ ಸ್ಥಗಿತವಾಗಿತ್ತು. ಈಗ ಕರಾವಳಿಯಲ್ಲಿ ಭತ್ತ ನಾಟಿ ಮಾಡುವ ಮೂಲಕ, ರೈತರೊಂದಿಗೆ ಬೆರೆಯುವ ಮೂಲಕ ಮತ್ತೆ ಕಾರ್ಯಕ್ರಮಕ್ಕೆ ಮರು ಚಾಲನೆ ಕೊಟ್ಟಂತಾಗಿದೆ ಎಂದು ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ಉಡುಪಿಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಿದ ಸಚಿವ ಬಿ.ಸಿ. ಪಾಟೀಲ್
ಉಡುಪಿಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಿದ ಸಚಿವ ಬಿ.ಸಿ. ಪಾಟೀಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT