ಉಡುಪಿ: ಆಮ್ಚೆ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಕೊಂಕಣಿ ಭಾಷೆಯ ‘ಆಮ್ಚೆ ಸಂಸಾರ್’ ಚಲನಚಿತ್ರದ ಪ್ರೀಮಿಯರ್ ಶೋ ಅ.24ರಂದು ಮಧ್ಯಾಹ್ನ 3ಕ್ಕೆ ಮಣಿಪಾಲದ ಕೆನರಾ ಮಾಲ್ನ ಭಾರತ್ ಸಿನಿಮಾಸ್ನಲ್ಲಿ ನಡೆಯಲಿದೆ ಎಂದು ಸಿನಿಮಾದ ಸಿನಿಮಾಟೊಗ್ರಫರ್ ಭುವನೇಶ್ ಪ್ರಭು ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಮಿಯರ್ ಶೋವನ್ನು ನಿರ್ದೇಶಕ ಕಾಸರಗೋಡು ಚಿನ್ನ ಉದ್ಘಾಟಿಸಲಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು.

2 ಗಂಟೆ 10 ನಿಮಿಷ ಅವಧಿಯ ಚಿತ್ರವು ಹಿರಿಯರ ಕುರಿತಾದ ಕಥಾವಸ್ತುವನ್ನು ಹೊಂದಿದೆ. ಚಿತ್ರ ನಿರ್ಮಾಣಕ್ಕಾಗಿ ₹ 30 ಲಕ್ಷ ವೆಚ್ಚವಾಗಿದೆ. ಉಡುಪಿ ಕುಂದಾಪುರ, ಕಾರ್ಕಳ ತಾಲ್ಲೂಕಿನ ಹಲವೆಡೆ ಚಿತ್ರೀಕರಣ ಮಾಡಲಾಗಿದೆ ಎಂದು ತಿಳಿಸಿದರು.

ಆರ್ಎಸ್ಬಿ ಭಾಷಿಕರು ಹೆಚ್ಚಾಗಿರುವ ಮುಂಬೈ, ಗೋವಾ, ಬೆಳಗಾವಿ, ದಕ್ಷಿಣ ಕನ್ನಡ, ಬೆಂಗಳೂರು, ಪುಣೆ ಸೇರಿದಂತೆ ಹಲವೆಡೆ ಚಿತ್ರ ಬಿಡುಗಡೆ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಸಂದೀಪ್ ಕಾಮತ್, ನಾಯಕ ರೋಹನ್ ನಾಯಕ್, ಕಲಾವಿದರಾದ ಪಾಂಡುರಂಗ ಪ್ರಭು, ಪ್ರವೀಣ್ ಪ್ರಭು, ಪುಂಡಲೀಕ ಮರಾಠೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.