ಕುಂದಾಪುರ: ಪಟ್ಟಣದ ಸಂಗಂ ಜಂಕ್ಷನ್ ಸೇರಿ ಪುರಸಭಾ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ವಿವಿಧ ಬೇಡಿಕೆಗಳ ಹಾಗೂ ಸಮಸ್ಯೆಗಳ ಕುರಿತು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಗುರುವಾರ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ಅಹವಾಲು ಆಲಿಸಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು.

ವಾಹನಗಳ ಸಂಚಾರ ದಟ್ಟಣೆ ಇರುವ ನಗರದ ಹೊರವಲಯದ ಸಂಗಂ ಜಂಕ್ಷನ್ಲ್ಲಿ ನೂತನ ಫ್ಲೈಓವರ್ ನಿರ್ಮಾಣ, ತತ್ ಕ್ಷಣಕ್ಕೆ ಹೈಮಾಸ್ಟ್ ದೀಪ ಅಳವಡಿಕೆ, ಚರಂಡಿ ವ್ಯವಸ್ಥೆ ಸರಿಪಡಿಸುವುದು, ಪ್ರಾಧಿಕಾರ ದಾಖಲಿಸಿದ ಮೊಕದ್ದಮೆ ವಾಪಸ್ ಸೇರಿ ಅನೇಕ ವಿಚಾರಗಳ ಕುರಿತು ಸಂಸದ ಕೋಟ ಹಾಗೂ ಶಾಸಕ ಕಿರಣ್ಕುಮಾರ ಕೊಡ್ಗಿ ಅವರು ಅಧಿಕಾರಿಗಳೊಂದಿಗೆ ವಿಸ್ತ್ರತ ಚರ್ಚೆ ಮಾಡಿದರು.

41 ಜನರಿಗೆ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿ ಹಣ ಪಾವತಿಸಬೇಕಿದೆ. ಪುರಸಭೆ ವ್ಯಾಪ್ತಿ ಬದಲು ಆನಗಳ್ಳಿ ಗ್ರಾಮದ ಮೌಲ್ಯದಂತೆ ಹಣ ನೀಡಬೇಕೆಂದು ಭೂಸ್ವಾಧೀನಾಧಿಕಾರಿ ಆದೇಶಿಸಿದ್ದನ್ನು ಪ್ರಶ್ನಿಸಿ ಜಿಲ್ಲಾಧಿಕಾರಿ ಕೋರ್ಟ್ನಲ್ಲಿ ಪ್ರಾಧಿಕಾರ ಮೇಲ್ಮನವಿ ಹಾಕಿತ್ತು. ಅಲ್ಲಿ ಸಾರ್ವಜನಿಕರ ಪರ ತೀರ್ಪು ಬಂದಿದ್ದು, 7 ಜನರ ಸಮಸ್ಯೆ ಇತ್ಯರ್ಥವಾಗಿದೆ. ಉಳಿದ ಪ್ರಕರಣಗಳನ್ನು ಪ್ರಾಧಿಕಾರ ಉಡುಪಿ ಕೋರ್ಟಿನಲ್ಲಿ ದಾಖಲಿಸಿದೆ. ಇದನ್ನು ಮರಳಿ ಪಡೆಯಲು, ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕರ ಬಳಿ ಮನವಿ ಮಾಡಲಾಗಿದೆ. ಕೇಸ್ ಮರಳಿ ಪಡೆದರೆ ಹಣ ಪಾವತಿಸಿ ಕಾಮಗಾರಿ ನಡೆಸಬಹುದು ಎಂದು ಪ್ರಾಧಿಕಾರದ ಹೊನ್ನಾವರ ವಿಭಾಗದ ಯೋಜನಾ ನಿರ್ದೇಶಕ ಶಿವಕುಮಾರ್ ಎಂ.ವಿವರಿಸಿದರು.

ಸಂಗಂ ಪ್ರದೇಶದಲ್ಲಿ ಅಪಘಾತಗಳಲ್ಲಿ 9 ಮಂದಿ ಸಾವನ್ನಪ್ಪಿದ್ದು, ಅನೇಕರು ಗಾಯಾಳುಗಳಾಗಿದ್ದಾರೆ. ಇಲ್ಲಿನ ಸಂಚಾರ ಒತ್ತಡದಿಂದ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿರುತ್ತವೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಹೋಗಲು ಬೇರೆ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿಯೇ ಯೂ ಟರ್ನ್ ಅನಿವಾರ್ಯ ಆಗಿದೆ. , ರಿಂಗ್ ರೋಡ್, ಚಿಕ್ಕನ್ ಸಾಲ್ ರಸ್ತೆ, ಆನಗಳ್ಳಿ ರಸ್ತೆ ಸೇರಿ ಐದು ಕಡೆಗಳಿಂದ ಭಾರಿ ವಾಹನಗಳು ಬರುವಾಗ ಸಹಜವಾಗಿ ಇಲ್ಲಿ ಇಕ್ಕಟ್ಟು, ಸಂಚಾರ ದಟ್ಟಣೆ ಸ್ವಾಭಾವಿಕವಾಗಿ ಇರುತ್ತದೆ. ಆದ್ದರಿಂದ ಇಲ್ಲಿ ಫ್ಲೈಓವರ್ ನಿರ್ಮಾಣದ ತುರ್ತು ಅಗತ್ಯ ಇದೆ ಎಂದು ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ರಾಜೇಶ್ ಕಡ್ಗಿಮನೆ, ಪುರಸಭೆ ಸದಸ್ಯ ಸಂತೋಷ್ ಶೆಟ್ಟಿ ಮೊದಲಾದವರು ಆಗ್ರಹಿಸಿದರು.

ಭೂಸ್ವಾಧೀನ ಕೇಸ್ ವಾಪಸಾತಿ, ಫ್ಲೈಓವರ್ ನಿರ್ಮಾಣ ಕುರಿತು ಸಂಸದರು ಸ್ಥಳದಲ್ಲೇ ಪ್ರಾದೇಶಿಕ ನಿರ್ದೇಶಕರ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು.

ಸರ್ವಿಸ್ ರಸ್ತೆ, ಚರಂಡಿ, ಹೈಮಾಸ್ಟ್ ದೀಪ ಆದ್ಯತೆ ಮೇರೆಗೆ ಮೊದಲಾಗಿ ಮಾಡಬೇಕು ಎಂದು ಶಾಸಕ ಎ.ಕಿರಣ್ಕುಮಾರ್ ಕೊಡ್ಗಿ ಹೇಳಿದರು. ಎಪಿಎಂಸಿ ಬಳಿ ಸಣ್ಣ ಮಳೆಗೂ ಚರಂಡಿ ಅವ್ಯವಸ್ಥೆಯಿಂದಾಗಿ ನೀರು ನಿಲ್ಲುತ್ತದೆ. ಪುರಸಭೆ ವ್ಯಾಪ್ತಿಯಲ್ಲೇ ಇಷ್ಟು ಸಣ್ಣ ಸರ್ವಿಸ್ ರಸ್ತೆ ಕಾಮಗಾರಿ ಬಾಕಿ ಆದುದು ಪ್ರಾಧಿಕಾರಕ್ಕೇ ಅವಮಾನ ಎಂದರು.

ಪುರಸಭೆ ವ್ಯಾಪ್ತಿಗೆ ಸ್ವಾಗತ, ನಿರ್ಗಮನ ವೇಳೆ ಶುಭ ವಿದಾಯ ಫಲಕಗಳು, ಎಪಿಎಂಸಿ ಬಳಿ ಚರಂಡಿ ದುರಸ್ತಿ ಸೇರಿ ವಿವಿಧ ಮನವಿಗಳನ್ನು ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಹೇಳಿದರು. ಅಧ್ಯಕ್ಷರ ಮನವಿಗೆ ಪ್ರಾಧಿಕಾರದವರು ಒಪ್ಪಿಗೆ ಸೂಚಿಸಿದರು.

ಪುರಸಭೆ ಸದಸ್ಯರಾದ ಶೇಖರ್ ಪೂಜಾರಿ, ಶ್ರೀಧರ ಶೇರೆಗಾರ್, ತಾ.ಪಂ ಮಾಜಿ ಅಧ್ಯಕ್ಷ ಭಾಸ್ಕರ ಬಿಲ್ಲವ, ಪುರಸಭೆ ಮುಖ್ಯಾಧಿಕಾರಿ ಆನಂದ್ ಜೆ., ಪರಿಸರ ಎಂಜಿನಿಯರ್ ಗುರುಪ್ರಸಾದ್, ಸ್ಥಳೀಯ ಪ್ರಮುಖರಾದ ಅರುಣ್ ಬಾಣ, ಸುರೇಂದ್ರ ಸಂಗಂ ಮೊದಲಾದವರು ಇದ್ದರು.