ಬ್ರಹ್ಮಾವರ: ಬಾರ್ಕೂರು ಬೆಣ್ಣೆಕುದ್ರು ಮೊಗವೀರ ಸಮಾಜದ ಕುಲದೇವಿ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ನೂತನ ಸಭಾಭವನದ ಶಿಲಾನ್ಯಾಸ ಕಾರ್ಯಕ್ರಮ ಬೆಣ್ಣೆಕುದ್ರು ದೇವಸ್ಥಾನದ ಬಳಿ ನಡೆಯಿತು.

ಶಿಲಾನ್ಯಾಸ ನೆರವೇರಿಸಿದ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಜಿ. ಶಂಕರ್ ಮಾತನಾಡಿ, ಸುಮಾರು 8 ಎಕ್ರೆ ಜಾಗದಲ್ಲಿ ₹2 ಕೋಟಿ ವೆಚ್ಚದಲ್ಲಿ ನೂತನ ಸಭಾಭವನ, ಹುಲ್ಲುಹಾಸಿನ ಮುಕ್ತ ಸಭಾಂಗಣ ನಿರ್ಮಾಣವಾಗಲಿದೆ. ಇಲ್ಲಿ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಅತಿಥಿ ಗೃಹ ಮುಂತಾದ ಸೌಲಭ್ಯ ಇರಲಿವೆ. ಇದರಿಂದ ಬರುವ ಆದಾಯದಿಂದ ಸಮಾಜ ಸೇವೆ, ವಿದ್ಯಾರ್ಥಿವೇತನ, ಅಶಕ್ತರಿಗೆ ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.

ಪ್ರವಾಸೋದ್ಯಮಕ್ಕೆ ಒತ್ತು ನೀಡಿ ಬೆಣ್ಣೆಕುದ್ರು ಪರಿಸರವನ್ನು ಬೆಳೆಸಲಾಗುವುದು ಎಂದು ಹೇಳಿದರು.

ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್, ಬಾರ್ಕೂರು ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷ ಸತೀಶ ಎಸ್. ಅಮೀನ್, ದೇವಸ್ಥಾನದ ಆಡಳಿತ ಮಂಡಳಿ ಖಜಾಂಚಿ ಶಂಕರ ಸಾಲ್ಯಾನ್, ಉದ್ಯಮಿಗಳಾದ ಶಿವ ಎಸ್. ಕರ್ಕೇರ, ತೀರ್ಥಹಳ್ಳಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ರಾಘವೇಂದ್ರ ಟಿ.ಎಸ್, ಉಳ್ಳಾಲ ಮಾರುತಿ ಜನಸೇವಾ ಸಂಘದ ಗೌರವಾಧ್ಯಕ್ಷ ವರದರಾಜ ಬಂಗೇರ, ಮಲ್ಪೆ ಮತ್ಸೋದ್ಯಮಿಗಳಾದ ಹರಿಯಪ್ಪ ಕೋಟ್ಯಾನ್, ಸುಧಾಕರ ಮೆಂಡನ್, ಎಂಜಿನಿಯರ್ಗಳಾದ ಯೋಗೀಶ ಚಂದ್ರಾಧರ, ಗುರುಪ್ರಸಾದ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.