ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಡಿಲು ಭೂಮಿಯಲ್ಲಿ ಕೃಷಿ

ಬಾರ್ಕೂರು ಯಂತ್ರಶ್ರೀ ನಾಟಿ ಪ್ರಾತ್ಯಕ್ಷಿಕೆ ಯಂತ್ರಶ್ರೀ ಯೋಜನೆ
Published 27 ಜೂನ್ 2024, 5:01 IST
Last Updated 27 ಜೂನ್ 2024, 5:01 IST
ಅಕ್ಷರ ಗಾತ್ರ

ಬ್ರಹ್ಮಾವರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ವೀರೇಂದ್ರ ಹೆಗ್ಗಡೆ ಅವರು ಕೃಷಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಯಂತ್ರಶ್ರೀ ಯೋಜನೆಯಿಂದ ಭತ್ತದ ಕೃಷಿ ಭೂಮಿ ಹಡಿಲು ಬೀಳುವುದು ಕಡಿಮೆ ಆಗುತ್ತಿದೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ರಮೇಶ ಪಿ.ಕೆ. ಹೇಳಿದರು.

ತಾಲ್ಲೂಕಿನ ಬಾರ್ಕೂರು ವಲಯದ ಕೂಡ್ಲಿ ಶ್ರೀನಿವಾಸ ಉಡುಪರ ಮನೆಯಲ್ಲಿ ಯಂತ್ರಶ್ರೀ ಯೋಜನೆ ಬಗ್ಗೆ ತರಬೇತಿ, ಯಂತ್ರಶ್ರೀ ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉದ್ಘಾಟನೆ ಮಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ, ಪ್ರಗತಿಪರ ಕೃಷಿಕ ಬಿ. ಶಾಂತರಾಮ ಶೆಟ್ಟಿ ಮಾತನಾಡಿ, ಕೋವಿಡ್‌ 19 ನಂತರ ರೈತರು ಕೃಷಿಯಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಇದು ಆಶಾದಾಯಕ ಬೆಳವಣಿಗೆ ಎಂದರು.

ಸಿಎಚ್ಎಸ್‌ಸಿ ಯೋಜನಾಧಿಕಾರಿ ಹರೀಶ ಎಚ್.ಎಸ್. ಅವರು ಯಂತ್ರಶ್ರೀ ಕಾರ್ಯಕ್ರಮ, ಸಸಿ ಮಡಿ ತಯಾರಿ, ಯಂತ್ರಗಳ ಮುಖಾಂತರ ನಾಟಿ ಮಾಡುವುದರಿಂದ ಆಗುವ ಅನುಕೂಲ, ಲಾಭ, ಸಾಂಪ್ರದಾಯಿಕ ಭತ್ತ ನಾಟಿ ಮತ್ತು ಯಂತ್ರಶ್ರೀ ನಾಟಿಗೆ ಇರುವ ವ್ಯತ್ಯಾಸದ ಬಗ್ಗೆ ಮಾಹಿತಿ ನೀಡಿದರು. ಯಂತ್ರಶ್ರೀ ನಾಟಿಯಿಂದ ಕಡಿಮೆ ಕೂಲಿ ಆಳುಗಳ ಮೂಲಕ ಕಡಿಮೆ ಖರ್ಚು, ಕಡಿಮೆ ಸಮಯದಲ್ಲಿ ಭತ್ತ ನಾಟಿ ಮಾಡಬಹುದು, ಅಧಿಕ ಇಳುವರಿ, ಲಾಭ ಪಡೆಯಬಹುದು ಎಂದು ತಿಳಿಸಿದರು.

ಯಡ್ತಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ ಶೆಟ್ಟಿ, ಪ್ರಗತಿಪರ ರೈತ ಶ್ರೀನಿವಾಸ ಉಡುಪ, ವೆಂಕಟರಮಣ ಉಡುಪ ಇದ್ದರು. ವಲಯ ಮೇಲ್ವಿಚಾರಕ ರವೀಂದ್ರ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಕುಸುಮ ವಂದಿಸಿದರು. ಯೋಜನೆಯ ಕೃಷಿ ಮೇಲ್ವಿಚಾರಕ ರಾಘವೇಂದ್ರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT