ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಕಳ | ಬೋಯಿಂಗ್ ನ್ಯಾಷನಲ್ ಏರೋ ಮಾಡೆಲಿಂಗ್ ಸ್ಪರ್ಧೆ: ನಿಟ್ಟೆ ತಂಡ ಪ್ರಥಮ

Published 10 ಮೇ 2024, 13:59 IST
Last Updated 10 ಮೇ 2024, 13:59 IST
ಅಕ್ಷರ ಗಾತ್ರ

ಕಾರ್ಕಳ: ಭಾರತದ 855 ಸಂಸ್ಥೆಗಳ 2,350ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಿದ 9ನೇ ವಾರ್ಷಿಕ ಬೋಯಿಂಗ್ ರಾಷ್ಟ್ರೀಯ ಏರೋ ಮಾಡೆಲಿಂಗ್ ಸ್ಪರ್ಧೆಯಲ್ಲಿ ಕಾರ್ಕಳದ ನಿಟ್ಟೆ ಎನ್ಎಂಎಎಂ ತಾಂತ್ರಿಕ ಕಾಲೇಜು ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಬೆಂಗಳೂರಿನಲ್ಲಿ ನಡೆದ ಫಿನಾಲೆಯಲ್ಲಿ 13 ತಂಡಗಳಿಂದ 44 ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ನಿಟ್ಟೆ ತಂಡದ ಮೇಘರಾಜ್ ಎಂ., ಸಾತ್ವಿಕ್ ಪೂಜಾರಿ ಮತ್ತು ಸಂಜನಾ ಎಸ್ ಅವರ ತಂಡವನ್ನು ವಿಜೇತರು ಎಂದು ಘೋಷಿಸಲಾಯಿತು.

ಸ್ಪರ್ಧೆಯ ವಲಯ ಸುತ್ತುಗಳು ಐಐಟಿ ಕಾನ್ಪುರ, ಐಐಟಿ ಬಾಂಬೆ, ಐಐಟಿ ಖರಗ್ಪುರ ಮತ್ತು ಐಐಟಿ ಮದ್ರಾಸ್‌ನಲ್ಲಿ ನಡೆದವು. ಬೆಂಗಳೂರಿನ ಆರ್.ವಿ. ಕಾಲೇಜ್ ಆಫ್ ಎಂಜಿನಿಯರಿಂಗ್ ಆಯೋಜಿಸಿದ್ದ ಅಂತಿಮ ಸುತ್ತಿಗೆ ಅಗ್ರ 13 ತಂಡಗಳು ಭಾಗವಹಿಸಿದ್ದವು. ವಾಯುಯಾನ ಮತ್ತು ಏರೋ ಮಾಡೆಲಿಂಗ್ ಕುರಿತ ಜಾಗೃತಿ, ಜ್ಞಾನ ಮತ್ತು ಮಾನ್ಯತೆಯನ್ನು ಉತ್ತೇಜಿಸಲು ಶಿಶು ಮಂದಿರ ಮತ್ತು ಬಿಲ್ಡಿಂಗ್ ಬ್ಲಾಕ್ಸ್ ಶಾಲೆಗಳ 60 ವಿದ್ಯಾರ್ಥಿಗಳನ್ನು ಸ್ಪರ್ಧೆಯ ಹೊರತಾಗಿ ಕಲಿಕೆಯ ಅಧಿವೇಶನಕ್ಕೆ ಆಹ್ವಾನಿಸಲಾಯಿತು.

ದೇಶದಾದ್ಯಂತ ವಿದ್ಯಾರ್ಥಿಗಳಿಗಾಗಿ ಬೋಯಿಂಗ್ ರಾಷ್ಟ್ರೀಯ ಏರೋ ಮಾಡೆಲಿಂಗ್ ಸ್ಪರ್ಧೆಯನ್ನು ವಿಮಾನ ತಯಾರಕ ಬೋಯಿಂಗ್ ಪ್ರಾಯೋಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT