ಉಡುಪಿ: ನಗರದ ಶಾರದಾ ವಸತಿ ಶಾಲೆಗೆ ಸೋಮವಾರ ಇ–ಮೇಲ್ ಮೂಲಕ ಬಾಂಬ್ ಬೆದರಿಕೆಯೊಡ್ಡಲಾಗಿದೆ.

ಕೂಡಲೇ ಮಕ್ಕಳನ್ನು ಶಾಲೆಯಿಂದ ಹೊರಗೆ ಕರೆ ತರಲಾಗಿತ್ತು. ಪೊಲೀಸರು, ಶ್ವಾನದಳದವರು ಶಾಲೆಗೆ ತಲುಪಿ ತಪಾಸಣೆ ನಡೆಸಿದರು.

ಬೆಳಗ್ಗಿನ ಜಾವ 4.45 ಕ್ಕೆ ಬೆದರಿಕೆ ಇ–ಮೇಲ್ ಬಂದಿದೆ. ಬೆಳಿಗ್ಗೆ 8 ಗಂಟೆಗೆ ಮೇಲ್ ನೋಡಿದ್ದೇವೆ. ಕೂಡಲೇ ಮಕ್ಕಳನ್ನು ಹೊರಗೆ ಕರೆತಂದಿದ್ದೇವೆ. 20 ರಾಜ್ಯಗಳ ಸುಮಾರು 816 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ಶ್ವಾನದಳದವರು ಎಲ್ಲಾ ತರಗತಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಯಾವುದೇ ಸುಳಿವು ಕಂಡುಬಂದಿಲ್ಲ ಎಂದು ಪ್ರಾಂಶುಪಾಲ ವಿನ್ಸೆಂಟ್ ಡಿಕೋಸ್ಟಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.