ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಾವರ: ಭೀಷ್ಮೋತ್ಪತ್ತಿ ಯಕ್ಷಗಾನ ಜ.18ರಂದು

Published 16 ಜನವರಿ 2024, 14:26 IST
Last Updated 16 ಜನವರಿ 2024, 14:26 IST
ಅಕ್ಷರ ಗಾತ್ರ

ಕೋಟ(ಬ್ರಹ್ಮಾವರ): ಕೋಟ ಹಂದೆ ವಿಷ್ಣುಮೂರ್ತಿ, ವಿನಾಯಕ ದೇವಸ್ಥಾನದ ಕಲ್ಯಾಣಿಯಲ್ಲಿ ದೇವಳದ ರಥೋತ್ಸವದ ಅವಭೃತವಲ್ಲದೆ ಕೋಟ ಹದಿನಾಲ್ಕು ಗ್ರಾಮಗಳ ಗುರುಪೀಠವೆನಿಸಿದ ಸಾಲಿಗ್ರಾಮ ಗುರುನರಸಿಂಹ ದೇಗುಲದ ರಥೋತ್ಸವದ ಅವಭೃತ ಜ. 18ರಂದು ನಡೆಯಲಿದೆ.

ಈ ಸಂದರ್ಭದಲ್ಲಿ ವಿಶ್ವವಿನಾಯಕ ವಿವಿಧೋದ್ದೇಶ ಸಹಕಾರಿ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಂಜೆ 5ಕ್ಕೆ ಸುದರ್ಶನ ಉರಾಳರ ಸಂಯೋಜನೆಯಲ್ಲಿ ಭೀಷ್ಮೊತ್ಪತ್ತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಕಲಾವಿದರಾಗಿ ವಿದ್ವಾಂಸ ಸುಜಯೀಂದ್ರ ಹಂದೆ, ಸೃಜನ್ ಹೆಗಡೆ, ಆದಿತ್ಯ ಭಟ್, ರಾಘವೇಂದ್ರ ಹೆಗಡೆ, ಸತೀಶ್ ಹಾಲಾಡಿ, ನಾಗರಾಜ ಕುಂಕಿಪಾಲ್, ಶಿವಾನಂದ ಕೋಟ, ಸುದೀಪ ಉರಾಳ್, ನವೀನ, ಉದಯ, ರಾಜು ಪೂಜಾರಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಸುದರ್ಶನ ಉರಾಳ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT