ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಅಧಿಕಾರಿಗಳ ತಂಡದಿಂದ ನೆರೆ ಸಮೀಕ್ಷೆ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ; ನೆರೆ ಕಾಮಗಾರಿ ಕುರಿತು ಮಾಹಿತಿ ಪಡೆದ ತಂಡ
Last Updated 14 ಡಿಸೆಂಬರ್ 2020, 15:06 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯ ನೆರೆ ಹಾನಿ ಪ್ರದೇಶಗಳಿಗೆ ಸೋಮವಾರ ಭೇಟಿನೀಡಿದ ಕೇಂದ್ರದ ಅಧಿಕಾರಿಗಳ ತಂಡ ಬೆಳೆಹಾನಿ ಪರಿಶೀಲನೆ ನಡೆಸಿತು. ನೆರೆ ಹಾನಿ ಪ್ರದೇಶಗಳಿಗೆ ಹಾಗೂ ರೈತರ ಮನೆಗಳಿಗೆ ಭೇಟಿ ನೀಡಿ ರೈತರು ಹಾಗೂ ಅಧಿಕಾರಿಗಳಿಂದ ಮಾಹಿತಿ ಕಲೆಹಾಕಿತು.

ಉಡುಪಿ ತಾಲ್ಲೂಕಿನ ಶಿವಳ್ಳಿಯ ಪಾಸ್ ಕುದ್ರು ಪ್ರದೇಶಕ್ಕೆ ಭೇಟಿನೀಡಿ ನೆರೆ ಹಾನಿ ಪ್ರದೇಶ ಪರಿಶೀಲಿಸಿ, ನಂತರ ಉಡುಪಿ ನಗರಕ್ಕೆ ನೀರು ಒದಗಿಸುವ ಬಜೆ ಡ್ಯಾಂಗೆ ಬೇಟಿ ನೀಡಿತು. ನೆರೆ ಸಂಧರ್ಭದಲ್ಲಿ ಬಜೆ ಡ್ಯಾಂನ ನೀರು ಪೂರೈಕೆ ಕೇಂದ್ರ ಸಂಪೂರ್ಣ ಮುಳುಗಿ ನೀರು ಸರಬರಾಜು ವ್ಯತ್ಯಯವಾಗಿತ್ತು. ಈ ಬಗ್ಗೆ ಪರಿಶೀಲಿಸಿ, ಅಣೆಕಟ್ಟೆಯ ಎತ್ತರ ಹಾಗೂ ನೀರಿನ ಹರಿವಿನ ಪ್ರಮಾಣ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಿತು.

ಬಳಿಕ ಬೊಮ್ಮರಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣಾಯಿಗೆ ಭೇಟಿನೀಡಿ, ನೆರೆ ಹಾನಿಗೊಳಗಾಗಿದ್ದ ಮನೆಗಳನ್ನು ವೀಕ್ಷಿಸಿದ ಅಧಿಕಾರಿಗಳು, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದರು. ಜಿಲ್ಲಾಡಳಿತದಿಂದ ತಾತ್ಕಾಲಿಕ ಪರಿಹಾರ ದೊರೆತಿರುವ ಬಗ್ಗೆ ಮಾಹಿತಿ ಪಡೆದರು.

ಕೃಷಿ ಜಮೀನು ಹಾನಿಯ ಬಗ್ಗೆಯೂ ವಿವರ ಪಡೆದ ಅಧಿಕಾರಿಗಳು, ಕಾರ್ಕಳ ತಾಲ್ಲೂಕಿನ ಕುಕ್ಕುಜೆ ಗ್ರಾಮಕ್ಕೆ ಭೇಟಿನೀಡಿ ವೆಂಟೆಡ್ ಡ್ಯಾಂ ವೀಕ್ಷಣೆ ಮಾಡಿತು. ಬ್ರಹ್ಮಾವರ ತಾಲ್ಲೂಕಿನ ನಡೂರು ಗ್ರಾಮದಲ್ಲಿ ಸೇತುವೆ ಹಾನಿ ವೀಕ್ಷಿಸಿ, ಬ್ರಹ್ಮಾವರ ಜನ್ನಾಡಿ ರಸ್ತೆಯ ಹಾನಿ ಹಾಗೂ ಕುಂದಾಪುರ ತಾಲ್ಲೂಕಿನ ತೆಕ್ಕಟ್ಟೆಯಲ್ಲಿನ ಸೈಕ್ಲೋನ್ ಶೆಲ್ಟರ್ ಪರಿಶೀಲನೆ ನಡೆಸಿದರು.

ನೆರೆ ಹಾನಿ ಪ್ರದೇಶಕ್ಕೆ ಭೇಟಿನೀಡುವ ಮುನ್ನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ಅಧಿಕಾರಿಗಳೂ, ಹಾನಿಯ ಕುರಿತು ಸಮಗ್ರ ವಿವರ ಪಡೆದರು. ನೆರೆ ಸಂದರ್ಭ ಜೀವಹಾನಿಯಾಗದಂತೆ ಎಚ್ಚರವಹಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅಧಿಕಾರಿಗಳು, ಸ್ಥಳೀಯರು ಸಹಕಾರವನ್ನು ಪ್ರಶಂಸಿಸಿದರು.

ಜಿಲ್ಲಾಧಿಕಾರಿ ಜಿ.ಜಗದೀಶ್‌ ಮಳೆ ವಿವರ ನೀಡಿ, ಸೆಪ್ಟೆಂಬರ್‌ನಲ್ಲಿ ಜಿಲ್ಲೆಯಲ್ಲಿ ಸಾಮಾನ್ಯ ಮಳೆ 405 ಮಿಮೀ ಆಗಿದ್ದು, 1,022 ಮಿಮೀ ಮಳೆ ಬಿದ್ದಿದೆ. ಶೇ 152ರಷ್ಟು ಅಧಿಕ ಮಳೆ ಆಗಿದೆ. ಅ.10 ರಿಂದ 15 ರವರೆಗೆ ಸಾಮಾನ್ಯ ಮಳೆ 40 ಮಿಮೀ ಆಗಿದ್ದು, 263 ಮಿಮೀ ಮಳೆ ಆಗಿದ್ದು, ಶೇ 553 ಅಧಿಕ ಮಳೆ ಬಿದ್ದಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ.

77 ಗ್ರಾಮಗಳು ಮಳೆಗೆ ಹಾನಿಯಾಗಿದ್ದು, 827 ಕುಟುಂಬಗಳ 2,874 ಜನರನ್ನು ರಕ್ಷಿಸಿದ್ದು, 31 ಕಾಳಜಿ ಕೇಂದ್ರಗಳನ್ನು ತೆರೆದು, 1,201 ಮಂದಿಗೆ ಆಶ್ರಯ ನೀಡಲಾಗಿತ್ತು, 3,694 ಮನೆಗಳಿಗೆ ಹಾನಿಯಾಗಿದೆ. ಒಟ್ಟು ₹ 323.70 ಕೋಟಿ ಹಾನಿ ಸಂಭವಿಸಿದೆ ಎಂದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಸಭೆಯಲ್ಲಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಕೇಂದ್ರ ತಂಡದ , ಸದಾನಂದ ಬಾಬು, ರಾಷ್ಟ್ರೀಯ ಹೆದ್ದಾರಿ ರಸ್ತೆ ಸಾರಿಗೆ ಪ್ರಾದೇಶಿಕ ಮುಖ್ಯ ಎಂಜಿನಿಯರ್ ದೀಪ್ ಶೇಖರ್ ಸಿಂಘ್ವಾಲ್, ಹಿರಿಯ ವಿಜ್ಞಾನಿ ಡಾ.ಸಿ.ಎನ್.ಪ್ರಭು, ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್, ಎಸ್‌ಪಿ ವಿಷ್ಣುವರ್ಧನ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT