ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಟಕಗಳಲ್ಲಿ ಜೀವಪರತೆ ಮುಖ್ಯ’

ಸಂತೋಷ್ ನಾಯಕ್ ಪಟ್ಲಗೆ ಸಿಜಿಕೆ ಪ್ರಶಸ್ತಿ ಪ್ರದಾನ
Last Updated 2 ಜುಲೈ 2019, 14:46 IST
ಅಕ್ಷರ ಗಾತ್ರ

ಉಡುಪಿ: ಪಟ್ಲದ ಯು.ಎಸ್‌.ನಾಯಕ್‌ ಪ್ರೌಢಶಾಲೆಯಲ್ಲಿ ಈಚೆಗೆಯುವ ನಿರ್ದೇಶಕ, ನಟ ಸಂತೋಷ್ ನಾಯಕ್ ಪಟ್ಲ ಅವರಿಗೆ ಪ್ರತಿಷ್ಠಿತ ಸಿಜಿಕೆ ರಂಗ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ನಮ್ಮ ತುಳುವೆರ್ ಕಲಾ ಸಂಘಟನೆ ಮುದ್ರಾಡಿ, ಸಂಸ ಥಿಯೇಟರ್ ಬೆಂಗಳೂರು ಮತ್ತು ಕರ್ನಾಟಕ ಬೀದಿ ನಾಟಕ ಅಕಾಡೆಮಿ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ರಂಗ ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್, ನಾಟಕವನ್ನು ಪಂಥಗಳಾಗಿ ವಿಂಗಡಿಸಿ ನೋಡುವ ಬದಲು, ನಾಟಕದಲ್ಲಿ ಜೀವಪರತೆಕಾಣಬೇಕು. ರಂಗ ನಿರ್ದೇಶಕನಿಗೆ ರಂಗದ ಬದ್ಧತೆ ಜೊತೆಗೆ ಸಾಮಾಜಿಕ ಬದ್ಧತೆ ಇರಬೇಕು ಎಂದು ಅಭಿಪ್ರಾಯಪಟ್ಟರು.

ಗ್ರಾಮೀಣ ಭಾಗದಲ್ಲಿ ತಯಾರಾಗುವ ನಾಟಕಗಳನ್ನು ನಗರ ಪ್ರದೇಶದಲ್ಲಿ ಪ್ರದರ್ಶಿಸುವುದು ಮುಖ್ಯವಲ್ಲ. ಗ್ರಾಮೀಣ ಭಾಗಗಳಲ್ಲೇನಾಟಕೋತ್ಸವಗಳು ನಡೆಯಬೇಕು. ಸಂತೋಷ್ ನಾಯಕ್ ಪಟ್ಲ ಅದನ್ನು ಬದ್ಧತೆಯಿಂದ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ರಂಗಕರ್ಮಿ ಐ.ಕೆ ಬೊಳುವಾರು ಮಾತನಾಡಿ, ‘ಸಿಜಿಕೆ ರಂಗ ಜಾಣ್ಮೆಯ ಮೂಲಕಬೀದಿನಾಟಕಗಳಿಗೆ ಹೊಸರೂಪವನ್ನು ಕೊಟ್ಟಿದ್ದಾರೆ. ಸಿಜಿಕೆಯ ಜೊತೆ ದುಡಿದವರು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಾಟಕವನ್ನು ಉಳಿಸಿ ಬೆಳೆಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಶಶಿಧರ್ ಮಾಸ್ತಿಬೈಲು, ಪಟ್ಲ ಯು.ಎಸ್ ನಾಯಕ್ ಪ್ರೌಢಶಾಲೆಯ ಸಂಚಾಲಕ ಅಣ್ಣಯ್ಯ ನಾಯಕ್ ಪಟ್ಲ, ನಿವೃತ್ತ ಮುಖ್ಯೋಪಾಧ್ಯಾಯ ನಾಗೇಶ್ ನಾಯಕ್ ಪಟ್ಲ, ಮುಖ್ಯೋಪಾಧ್ಯಾಯ ಶ್ರೀಕಾಂತ ಪ್ರಭು, ಶಿಕ್ಷಕ ಎಚ್.ಎನ್ ನಟರಾಜ್, ಉಪಸ್ಥಿತರಿದ್ದರು.

ನಮ್ಮ ತುಳುವೆರ್ ಸಂಘಟನೆ ಅಧ್ಯಕ್ಷ ಸುಕುಮಾರ್ ಮೋಹನ್ ಸ್ವಾಗತಿಸಿದರು. ಭೂಮಿಗೀತ ಸಂಘಟನೆ ಅಧ್ಯಕ್ಷ ಸುಧೀರ್ ಕುಮಾರ್ ಪಟ್ಲ ವಂದಿಸಿದರು. ನಾಗೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT