ಬ್ರಹ್ಮಾವರ: ಬಾರ್ಕೂರು–ಬ್ರಹ್ಮಾವರ ಲಯನ್ಸ್ ಕ್ಲಬ್ ವತಿಯಿಂದ ಸಾಹೇಬರಕಟ್ಟೆ ಮಹಾತ್ಮಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಎರಡು ನೂತನ ಕಂಪ್ಯೂಟರ್ಗಳನ್ನು ಲಯನ್ಸ್ ಜಿಲ್ಲೆ 317ಸಿಯ ಜಿಲ್ಲಾ ಗವರ್ನರ್ ಸಪ್ನಾ ಸುರೇಶ ಮತ್ತು ಲಯನ್ಸ್ ಕ್ಲಬ್ನ ಅಧ್ಯಕ್ಷ ಸುದೇಶ ಹೆಗ್ಡೆ ಅವರು ವಿದ್ಯಾಸಂಸ್ಥೆಗೆ ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಸಪ್ನಾ ಸುರೇಶ, ‘ಶೈಕ್ಷಣಿಕ ಡಿಜಿಟಲೀಕರಣದ ಈ ಪರ್ವಕಾಲದಲ್ಲಿ ಗ್ರಾಮೀಣ ಮಕ್ಕಳು ಕಂಪ್ಯೂಟರ್ ಸಾಕ್ಷರತೆ ಸಾಧಿಸಿಕೊಂಡು, ಸಮಾಜದ ಮುಖ್ಯ ವಾಹಿನಿಯಲ್ಲಿ ಮುನ್ನುಗ್ಗಬೇಕು’ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಬ್ರಹ್ಮಾವರ ಬಾರ್ಕೂರು ಲಯನ್ಸ್ ಕ್ಲಬ್ ಕಾರ್ಯದರ್ಶಿ ಪ್ರದೀಪ ಶೆಟ್ಟಿ, ಕೋಶಾಧಿಕಾರಿ ಪ್ರಭಾಕರ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ಕ್ಯಾಬಿನೆಟ್ ಸೆಕ್ರೆಟರಿ ಶಾಲಿನಿ, ಶಾಲಾಭಿವೃದ್ಧಿ ಸಮಿತಿಯ ಸ್ಥಾಪಕ ಅಧ್ಯಕ್ಷ ವೈ. ಸತೀಶ್ ಕುಮಾರ್ ಶೆಟ್ಟಿ, ಪ್ರಸಕ್ತ ಅಧ್ಯಕ್ಷ ಕೆ.ರವೀಂದ್ರನಾಥ ಶೆಟ್ಟಿ, ಕಾರ್ಯದರ್ಶಿ ಕೆ.ಪ್ರಸಾದ್ ಶೆಟ್ಟಿ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಎಂ. ರವೀಂದ್ರನಾಥ ಕಿಣಿ ಇದ್ದರು.

ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸತೀಶ ನಾಯ್ಕ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ವಿಜಯ ಕುಮಾರ್ ಶೆಟ್ಟಿ ವಂದಿಸಿದರು. ಕನ್ನಡ ಭಾಷಾ ಶಿಕ್ಷಕ ಗಣೇಶ ನಾಯಕ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.