ಮಂಗಳವಾರ, ಜನವರಿ 19, 2021
25 °C

ಉಡುಪಿ: ಒಂದು ಕೋವಿಡ್‌ ದೃಢ, ಜಿಲ್ಲೆಯಲ್ಲಿ ಇಳಿಮುಖವಾದ ಸೋಂಕಿನ ಪ್ರಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಿಲ್ಲೆಯಲ್ಲಿ ಸೋಮವಾರ ಒಂದು ಕೋವಿಡ್‌–19 ಪ್ರಕರಣ ಮಾತ್ರ ದೃಢಪಟ್ಟಿದ್ದು, ಹೊರ ಜಿಲ್ಲೆಯಿಂದ ಬಂದಿದ್ದ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ಕನಿಷ್ಠ ಮಠಕ್ಕೆ ಇಳಿದಿದ್ದು, ಸಕ್ರಿಯ ಸೋಂಕಿತರ ಪ್ರಮಾಣವೂ ಕುಸಿಯುತ್ತಿದೆ.

ಸೋಮವಾರ 20 ಮಂದಿ ಸೇರಿ ಜಿಲ್ಲೆಯಲ್ಲಿ ಇದುವರೆಗೂ 22,927 ಮಂದಿ ಗುಣಮುಖರಾಗಿದ್ದಾರೆ. 80 ಸಕ್ರಿಯ ಸೋಂಕಿತರು ಇದ್ದಾರೆ. ಒಟ್ಟು ಸೋಂಕಿತ ಪ್ರಕರಣಗಳು 23,196 ಇದ್ದು, 189 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು