ಗುರುವಾರ , ಅಕ್ಟೋಬರ್ 1, 2020
20 °C
ಗುರುವಾರ 402 ಮಂದಿಗೆ ಸೋಂಕು; ಒಬ್ಬರು ಸಾವು

ಉಡುಪಿ | ಏಳು ಸಾವಿರ ಗಡಿ ದಾಟಿದ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ 7000ದ ಗಡಿ ದಾಟಿದೆ. ಗುರುವಾರ 402 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ ಉಡುಪಿಯ 232, ಕುಂದಾಪುರದ 117, ಕಾರ್ಕಳದ 49, ಬೇರೆ ಜಿಲ್ಲೆಯ ನಾಲ್ವರು ಸೇರಿದ್ದಾರೆ.

ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 176 ಮಂದಿಗೆ, ಐಎಲ್‌ಐ ಲಕ್ಷಣಗಳಿದ್ದ 81, ಸಾರಿ ಲಕ್ಷಣಗಳಿದ್ದ ಮೂವರು, ಅಂತರ ಜಿಲ್ಲೆಗೆ ಪ್ರಯಾಣ ಬೆಳೆಸಿದ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. 140 ಜನರ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.

99 ಸೋಂಕಿತರಲ್ಲಿ ರೋಗದ ಲಕ್ಷಣಗಳು ಕಂಡುಬಂದರೆ, 303 ಸೋಂಕಿತರಲ್ಲಿ ಲಕ್ಷಣಗಳು ಕಂಡುಬಂದಿಲ್ಲ. 190 ಮಂದಿಗೆ ಕೋವಿಡ್‌ ಆಸ್ಪತ್ರೆ ಹಾಗೂ ಕೋವಿಡ್‌ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 212 ಜನರಿಗೆ ಹೋಂ ಐಸೊಲೇಷನ್‌ನಲ್ಲಿರಿಸಿ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ.

ಗುರುವಾರ 1,697 ಜನರ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಸಗಿದ್ದು, 1855 ವರದಿಗಳು ಬರುವುದು ಬಾಕಿ ಇದೆ. 

50,000 ದಾಟಿದ ಮಾದರಿ ಸಂಗ್ರಹ: ಜಿಲ್ಲೆಯಲ್ಲಿ ಇದುವರೆಗೂ 50,793 ಜನರ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದ್ದು, 41,763 ನೆಗೆಟಿವ್ ವರದಿ ಬಂದಿದ್ದು, 7,175 ಪಾಸಿಟಿವ್ ಬಂದಿದೆ. ಗುರುವಾರ 1,185 ನೆಗೆಟಿವ್ ಬಂದಿದ್ದು, 402 ಪಾಸಿಟಿವ್‌ ಕಂಡು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

292 ಗುಣಮುಖ: ಕೋವಿಡ್‌ ಸೋಂಕಿನಿಂದ 292 ರೋಗಿಗಳು ಗುಣಮುಖರಾಗಿದ್ದು, ಇದುವರೆಗೂ 4,258 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2,847 ಸಕ್ರಿಯ ಸೋಂಕಿತರು ಇದ್ದಾರೆ. ಇವರಲ್ಲಿ ಕೋವಿಡ್‌ ಆಸ್ಪತ್ರೆಗಳಲ್ಲಿ 1,449 ಸೋಂಕಿತರಿದ್ದರೆ, ಹೋಂ ಐಸೊಲೇಷನ್‌ನಲ್ಲಿ 1,398 ಮಂದಿ ಇದ್ದಾರೆ.

ಗುರುವಾರ ಕಿಡ್ನಿ ಹಾಗೂ ಇತರೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಉಡುಪಿಯ 56 ವರ್ಷದ ಕೋವಿಡ್ ಸೋಂಕಿತ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 70ಕ್ಕೇರಿಕೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು