ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಟ್ಯಾಗ್‌ ಕೋವಿಡ್‌ ಉಚಿತ ಹೆಲ್ಪ್‌ಲೈನ್‌: ಜಾಲತಾಣಗಳ ಮೂಲಕ ಮಾಹಿತಿ

Last Updated 28 ಮೇ 2021, 3:40 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಬೇಕಾದ ಅಗತ್ಯ ಮಾಹಿತಿ ನೀಡುವ ಕೆಲಸವನ್ನು ಸಿಟ್ಯಾಗ್‌ (ಸಿಟಿಜನ್‌ ಇನ್‌ವಾಲ್ಡ್‌ ಟೆಕ್ನಾಲಜಿ ಅಡ್ವಾನ್ಸಡ್‌ ಗೌರ್ನೆನ್ಸ್‌) ಮೂಲಕ ಮಾಡಲಾಗುತ್ತಿದೆ. ಬೇರೆ ಬೇರೆ ವೃತ್ತಿಯಲ್ಲಿ ಇರುವ ಸ್ವಯಂಸೇವಕರ ತಂಡವು, ಕೌಶಲ, ಜ್ಞಾನವನ್ನು ಬಳಸಿಕೊಂಡು ಸದ್ದಿಲ್ಲದೇ ಸರ್ಕಾರಕ್ಕೆ ಸಹಾಯ ಮಾಡುತ್ತಿದೆ.

ಈಗಾಗಲೇ ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ– ಹುಬ್ಬಳ್ಳಿ, ಬೆಂಗಳೂರಿನಲ್ಲಿ ಸಿಟ್ಯಾಗ್‌ ಕೋವಿಡ್‌ ಹೆಲ್ಪ್‌ಲೈನ್‌ ಕೇಂದ್ರಗಳಿಗೆ ಚಾಲನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಸಿಟ್ಯಾಗ್‌ ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಪ್ರತಿ ಜಿಲ್ಲೆಯಲ್ಲಿ ವೈದ್ಯರು, ಪದವೀಧರರು, ಸಾಫ್ಟವೇರ್‌ ಎಂಜಿನಿಯರ್‌, ವಕೀಲರು, ನಿವೃತ್ತ ಅಧಿಕಾರಿಗಳು, ಯುವಕರು ಸೇರಿದಂತೆ ಬೇರೆ ಬೇರೆ ವೃತ್ತಿಯಲ್ಲಿ ಇರುವವರ ತಂಡವು ಉಚಿತ ಸೇವೆ ಮಾಡುತ್ತಿದೆ.

ಸಿಟ್ಯಾಗ್‌ ಖಾಸಗಿ ಆಸ್ಪತ್ರೆಗಳ ಸಮಗ್ರ ಚಿತ್ರಣವನ್ನು ಕಟ್ಟಿ ಕೊಡುತ್ತಿದೆ. ಪ್ರತಿ ಆಸ್ಪತ್ರೆಗೆ ಸ್ವಯಂಸೇವಕರಿದ್ದು, ಕೋವಿಡ್‌ ಸೋಂಕಿತರು ಸಿಟ್ಯಾಗ್‌ ಕೋವಿಡ್‌ ಹೆಲ್ಪ್‌ಲೈನ್‌ ವೆಬ್‌ಸೈಟ್‌ ಅನ್ನು ಸಂಪರ್ಕಿಸಿದರೆ, ಪ್ರತಿ ಹಂತದ ಮಾಹಿತಿಯನ್ನು ವೆಬ್‌ಸೈಟ್‌ ಮೂಲಕ ಸೋಂಕಿತರಿಗೆ ಕಲ್ಪಿಸಲಾಗುತ್ತಿದೆ.

ಸೋಂಕಿತರಿಗೆ ಬೇಕಾದ ಎಲ್ಲ ದೃಢೀಕೃತ ಮಾಹಿತಿಯನ್ನುಸಕಾಲದಲ್ಲಿ ರವಾನಿಸುವ ಉದ್ದೇಶದಿಂದ ಸ್ವಯಂಸೇವಕರ ತಂಡ ಕಟ್ಟುವ ಆಲೋಚನೆ ಶುರುವಾಗಿತ್ತು. ಈ ಆಲೋಚನೆಯೇ ಇದೀಗ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತನ್ನ ಸೇವೆಯನ್ನು ವಿಸ್ತರಣೆ ಮಾಡಿದೆ.

ಸೋಂಕಿತರ ಚಿಕಿತ್ಸೆಗೆ ಬೇಕಾದ ವೈದ್ಯರು, ಆಪ್ತ ಸಮಾಲೋಚಕರು, ಸಹಾಯವಾಣಿ, ಆಮ್ಲಜನಕ ಸಾಂದ್ರಕಗಳು, ಪಲ್ಸ್‌ ಆಕ್ಸಿಮೀಟರ್‌ಗಳು, ಆಂಬುಲೆನ್ಸ್ ಸೇವೆ, ಐಸೊಲೇಷನ್‌ನಲ್ಲಿ ಇರುವವರು ಊಟ ಪೂರೈಕೆ ವ್ಯವಸ್ಥೆ, ವೆಂಟಿಲೇಟರ್, ಐಸಿಯು ಹಾಸಿಗೆ, ಆಮ್ಲಜನಕ ಹಾಸಿಗೆ, ಮನೆ ಸಹಾಯಕರು, ಲ್ಯಾಬ್‌ ಸರ್ವಿಸ್‌, ಕೋವಿಡ್‌ ಲಸಿಕೆ ಲಭ್ಯತೆ, ಕೇಂದ್ರಗಳ ಬಗ್ಗೆ ಮಾಹಿತಿಯನ್ನು ಉಚಿತವಾಗಿ ನೀಡಲಾಗುತ್ತಿದೆ.

‘ಸಿಟ್ಯಾಗ್‌ ಹೆಸರಿನಲ್ಲಿ ರಾಜ್ಯದಾದ್ಯಂತ ಸ್ವಯಂಸೇವಕರು ಸಾಮಾಜಿಕ ಜಾಲತಾಣ, ವೆಬ್‌ಸೈಟ್‌, ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಮ್‌ ಮೂಲಕ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ 500 ಮಂದಿ ಸ್ವಯಂಸೇವಕರು ತಂಡ ಸೇರಿಕೊಂಡಿದ್ದು, ತರಬೇತಿಯ ನಂತರ ಇನ್ನು 1,500 ಮಂದಿ ಸೇರ್ಪಡೆ ಆಗಲಿದ್ದಾರೆ’ ಎಂದು ಉಡುಪಿ ಜಿಲ್ಲೆಯ ಸಿಟ್ಯಾಗ್‌ ತಂಡದ ಸಾರ್ವಜನಿಕ ಸಂಪರ್ಕ ಅಧಿಕಾರಿ, ತರಬೇತುದಾರರ ದೀಪಕ್‌ ಶೆಣೈ ಮಾಹಿತಿ ನೀಡಿದರು.

ಉಚಿತ ಮಾಹಿತಿಗಾಗಿ ವೆಬ್‌ಸೈಟ್‌

‘ಸಿಟ್ಯಾಗ್‌ ಹೆಲ್ಪ್‌ಲೈನ್‌ ವೆಬ್‌ಸೈಟ್‌ www.citagcovidhelpline.in

twitter.com/citaghelpline ಸಂಪರ್ಕ ಮಾಡಬಹುದು

ಸ್ವಯಂಸೇವಕರಾಗಲು https://tinyurl.com/citagvolunteer ಸಂಪರ್ಕಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT