ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ವರ್ಷ ಮೇಲ್ಪಟ್ಟ 386 ಮಂದಿಗೆ ಲಸಿಕೆ

ಲಸಿಕಾ ಕೇಂದ್ರಕ್ಕೆ ಮುಗಿಬಿದ್ದ ಸಾರ್ವಜನಿಕರು, ಅಧಿಕಾರಿಗಳ ವಿರುದ್ಧ ಆಕ್ರೋಶ
Last Updated 10 ಮೇ 2021, 15:26 IST
ಅಕ್ಷರ ಗಾತ್ರ

ಉಡುಪಿ: 18 ವರ್ಷ ಮೇಲ್ಪಟ್ಟ ಹಾಗೂ 44 ವರ್ಷದೊಳಗಿನವರಿಗೆಸೋಮವಾರದಿಂದ ಕೋವಿಡ್ ಲಸಿಕೆ ಹಾಕಲಾಗುತ್ತಿದ್ದು, ಸಾರ್ವಜನಿಕರು ಲಸಿಕೆ ಹಾಕಿಸಿಕೊಳ್ಳಲು ಮುಗಿಬಿದ್ದಿದ್ದ ದೃಶ್ಯ ಬ್ರಹ್ಮಗಿರಿಯ ಸೇಂಟ್ ಸಿಸಿಲಿಸ್ ಶಾಲೆಯ ಆವರಣದಲ್ಲಿ ಕಂಡುಬಂತು. ಮೊದಲ ದಿನ 386 ಮಂದಿಗೆ ಮಾತ್ರ ಲಸಿಕೆ ದೊರೆಯಿತು.

ಅಂತರ ಪಾಲನೆ ಇಲ್ಲ

ಲಸಿಕೆ ಹಾಕಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ಲಸಿಕಾ ಕೇಂದ್ರದ ಎದುರು ದಟ್ಟಣೆ ಕಂಡುಬಂತು. ವೃದ್ಧರು, ಮಹಿಳೆಯರು ಬಿಸಿಲಿನಲ್ಲಿಯೇ ನಿಂತಿದ್ದರು. ಸರತಿ ಸಾಲಿನಲ್ಲೂ ಅಂತರ ಇರದೆ, ಕೊರೊನಾ ಸೋಂಕು ಹರಡುವ ಅಪಾಯ ಹೆಚ್ಚಾಗಿತ್ತು.

ಜಿಲ್ಲೆಗೆ ಅಗತ್ಯ ಪ್ರಮಾಣದಲ್ಲಿ ಲಸಿಕೆ ಪೂರೈಕೆಯಾಗದ ಪರಿಣಾಮ ಎಲ್ಲರಿಗೂ ಲಸಿಕೆ ಸಿಗುತ್ತಿಲ್ಲ. ಎರಡನೇ ಡೋಸ್ ಅಗತ್ಯವಿದ್ದವರಿಗೆ ಹಾಗೂ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿಕೊಂಡ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ಹಾಕಲಾಗುತ್ತಿದೆ. ಲಸಿಕೆ ಪಡೆಯುವ ದಿನವನ್ನು ಸಂದೇಶದ ಮೂಲಕ ಕಳಿಸಿದ್ದರೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನಿತ್ಯ ಲಸಿಕಾ ಕೇಂದ್ರಗಳತ್ತ ದೌಡಾಯಿಸುತ್ತಿರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ ಎನ್ನುತ್ತಾರೆ ಅಧಿಕಾರಿಗಳು

ಜಿಲ್ಲೆಯಲ್ಲಿ ಎರಡನೇ ಡೋಸ್‌ ಪಡೆಯಲು ಅರ್ಹರಿರುವ 50,000ಕ್ಕೂ ಅಧಿಕ ಮಂದಿ ಇದ್ದಾರೆ. ಸರ್ಕಾರದಿಂದ ಲಸಿಕೆ ಪೂರೈಕೆಯಾದಂತೆ ಲಸಿಕೆ ಹಾಕಲಾಗುವುದು. ಸಂದೇಶ ಬಂದವರು ಮಾತ್ರ ಲಸಿಕಾ ಕೇಂದ್ರಕ್ಕೆ ಬರಬೇಕು ಎಂದು ಅಧಿಕಾರಿಗಳು ಮನವಿ ಮಾಡಿದರು.

ಮಂಗಳವಾರ ಸೇಂಟ್ ಸಿಸಿಲಿಸ್‌ ಶಾಲೆಯಲ್ಲಿ 45 ವರ್ಷ ಮೇಲ್ಪಟ್ಟಿರುವ 2ನೇ ಡೋಸ್‌ ಬಾಕಿ ಇರುವ 100 ಮಂದಿಗೆ, 18 ವರ್ಷ ಮೇಲ್ಪಟ್ಟ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿಕೊಂಡಿರುವ 150 ಮಂದಿಗೆ ಮೊದಲ ಡೋಸ್‌, ಕೂಸಮ್ಮ ಶಂಭುಶೆಟ್ಟಿ ಹಾಜಿ ಅಬ್ದುಲ್ಲ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 150 ಡೋಸ್‌ ಲಸಿಕೆ ಹಾಕಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT