ಬುಧವಾರ, ಫೆಬ್ರವರಿ 19, 2020
27 °C

ಗಾಂಜಾ ಸೇವನೆ: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯ ಹಲವೆಡೆ ಗಾಂಜಾ ಸೇವನೆ ಮಾಡುತ್ತಿದ್ದವರನ್ನು ವಶಕ್ಕೆ ಪಡೆದು ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಮಣಿಪಾಲದ ಮನೀಶ್‌ ಆಪಾರ್ಟ್‌ಮೆಂಟ್‌ ಬಳಿ ಬ್ರಿಟ್ಟೊ ಕೆ.ಎಪನ್, ಜಿಬ್ರಾನ್ ಖಾನ್, ಜೆರ್ಮಿನ್ ಜೋಸೆಫ್‌, ಟೈಗರ್ ಸರ್ಕಲ್ ಬಳಿ ಧ್ರುವ ಫಲಡೆಸೈ ಹಾಗೂ ಮೂಡನಿಡಂಬೂರು ಗ್ರಾಮದ ಸರ್ವೀಸ್ ಬಸ್ ನಿಲ್ದಾಣದ ಬಳಿ ದನುಷ್‌ ಕುಂದರ್‌, ಕೌಶಿಕ್‌ ಎಂಬುವರನ್ನು ವಶಕ್ಕೆ ಪಡೆದು ಕೆಎಂಸಿ ಫೊರೆನ್ಸಿಕ್ ವಿಭಾಗದಲ್ಲಿ ಪರೀಕ್ಷೆಗೊಳಪಡಿಸಲಾಯಿತು. ಗಾಂಜಾ ಸೇವನೆ ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆನ್‌ಲೈನ್ ವಂಚನೆ
ಉಡುಪಿ:
ಕೊರಂಗ್ರಪಾಡಿಯ ನಿತಿನ್ ಕೃಷ್ಣ ಅವರ ಆ್ಯಕ್ಸಿಸ್ ಬ್ಯಾಂಕ್‌ ಖಾತೆಯಿಂದ ವಂಚಕರು ₹1,33,898 ನಗದು ಎಗರಿಸಿದ್ದಾರೆ.

ನಿತಿನ್ ಕೃಷ್ಣಗೆ ಫೆ.3ರಂದು ಕರೆ ಮಾಡಿದ ವಂಚಕರು, ಬ್ಯಾಂಕ್‌ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಕ್ರೆಡಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್‌ ನಂಬರ್, ಸಿವಿವಿ ನಂಬರ್ ಹಾಗೂ ಮೊಬೈಲ್ ಒಟಿಪಿ ವಿವರ ಪಡೆದು ಕ್ರೆಡಿಟ್‌ ಕಾರ್ಡ್‌ನಿಂದ ₹1,20,100, ಡೆಬಿಟ್ ಕಾ‌ರ್ಡ್‌ನಿಂದ ₹13,798 ದೋಚಿದ್ದಾರೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು