ಸೋಮವಾರ, ನವೆಂಬರ್ 29, 2021
20 °C

ಚಿನ್ನಾಭರಣ ನಗದು ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಮಲ್ಪೆಯ ವಢಬಾಂಡೇಶ್ವರ ದೇವಸ್ಥಾನದ ಬಳಿಯ ಜಯಲಕ್ಷ್ಮೀ ಎಂಬುವರ ಮನೆಯಲ್ಲಿ ಕಳವು ನಡೆದಿದ್ದು ಚಿನ್ನಾಭರಣ ಹಾಗೂ ನಗದು ದೋಚಲಾಗಿದೆ.

ಜಯಲಕ್ಷ್ಮೀ ಅವರು ಅ.16ರಂದು ಬೆಂಗಳೂರಿನಲ್ಲಿರುವ ಮಗನ ಮನೆಗೆ ಹೋಗಿದ್ದಾಗ ಕಳವು ನಡೆದಿದ್ದು, ಮನೆಯಲ್ಲಿದ್ದ ಕಪಾಟನ್ನು ಮುರಿದು ಮುತ್ತಿನ ಸರ, ಚಿನ್ನದ ಬಳೆಗಳು, ಬಂಗಾರದ ಸರ, ನಕ್ಲೆಸ್‌, ಉಂಗುರಗಳು, 2 ಕೆ.ಜಿ ಬೆಳ್ಳಿ ಸಾಮಾಗ್ರಿ, ₹ 70,000 ನಗದು ಕಳವು ಮಾಡಿದ್ದಾರೆ. 

ಕಳುವಾದ ಬಂಗಾರದ ಮೌಲ್ಯ ₹ 5,61,600 ಆಗಿದ್ದು, ಬೆಳ್ಳಿಯ ಮೌಲ್ಯ ₹ 90,000 ಎಂದು ಅಂದಾಜಿಸಲಾಗಿದೆ.

ಲ್ಯಾಪ್‌ಟಾಪ್ ಕಳವು

ಉಡುಪಿ: ನಗರದ ಕಿದಿಯೂರು ಹೋಟೆಲ್ ಬಳಿ ನಿಲ್ಲಿಸಲಾಗಿದ್ದ ಕಾರಿನಿಂದ ಶನಿವಾರ ಲ್ಯಾಪ್‌ಟಾಪ್ ಕಳವು ಮಾಡಲಾಗಿದೆ.

ದಿವ್ಯಾ ಶೆಟ್ಟಿ ರಾತ್ರಿ ಊಟ ಮಾಡಲು ಕಿದಿಯೂರು ಹೋಟೇಲ್‌ಗೆ ಬಂದಿದ್ದು, ಹೋಟೆಲ್ ಹೊರಭಾಗದ ಪಾರ್ಕಿಂಗ್‌ ಜಾಗದಲ್ಲಿ ಕಾರು ನಿಲ್ಲಿಸಿದ್ದು, ಕಳ್ಳರು ಕಾರಿನ ಗಾಜು ಒಡೆದು ಲ್ಯಾಪ್‌ಟಾಪ್ ಹಾಗೂ ಬಟ್ಟೆಗಳಿದ್ದ ಸೂಟ್‌ಕೇಸ್‌ ಕದ್ದೊಯ್ದಿದ್ದಾರೆ. ಕಳುವಾದ ಲ್ಯಾಪ್‌ಟಾಪ್‌ ಮೌಲ್ಯ 1 ಲಕ್ಷ ಎಂದು ಅಂದಾಜಿಸಲಾಗಿದ್ದು, ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು