ಮಂಗಳವಾರ, ಸೆಪ್ಟೆಂಬರ್ 28, 2021
22 °C
ಶೃಂಗೇರಿಯತ್ತ ಪಯಣ; ಜೆಡಿಎಸ್‌ನಿಂದ ಗೌಡರ ಪೂರ್ವಭಾವಿ ಹುಟ್ಟುಹಬ್ಬ ಆಚರಣೆ

ಪ್ರಕೃತಿ ಚಿಕಿತ್ಸೆ ಮುಗಿಸಿ ಹೊರಟ ದೇವೇಗೌಡರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕಾಪುವಿನ ಮೂಳೂರಿನಲ್ಲಿರುವ ಸಾಯಿ ರಾಧ ರೆಸಾರ್ಟ್‌ನಲ್ಲಿ ಒಂದು ವಾರದಿಂದ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದ ಜೆಡಿಎಸ್‌ ವರಿಷ್ಠ ದೇವೇಗೌಡರು ಬುಧವಾರ ಶೃಂಗೇರಿಯತ್ತ ತೆರಳಿದರು.

ಆಯುರ್ವೇದ ತಜ್ಞ ತನ್ಮಯ ಗೋಸ್ವಾಮಿ ಅವರು ದೇವೇಗೌಡರಿಗೆ ಪಂಚಕರ್ಮ ಸಹಿತ ಮಣಿಗಂಟು ನೋವಿಗೆ ಚಿಕಿತ್ಸೆ ನೀಡುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗಿದ್ದು, ಗೌಡರು ವಾಪಾಸಾಗಿದ್ದಾರೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ದೇವೇಗೌಡರಿಗೆ ರೆಸಾರ್ಟ್‌ನ ಸಿಬ್ಬಂದಿ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿತು. ಈ ಸಂದರ್ಭ ಜಿಲ್ಲಾ ಜೆಡಿಎಸ್‌ನಿಂದ ದೇವೇಗೌಡರ ಹುಟ್ಟುಹಬ್ಬಕ್ಕೆ ಪೂರ್ವಭಾವಿಯಾಗಿ ಚಿಕ್ಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದೇವೇಗೌಡರು ಕೇಕ್ ಕತ್ತರಿಸಿ ಎಲ್ಲರಿಗೂ ಹಂಚಿದರು. ಬಳಿಕ ಪತ್ನಿ ಚನ್ನಮ್ಮ ಅವರೊಟ್ಟಿಗೆ ಶೃಂಗೇರಿಯತ್ತ ಗೌಡರು ಪ್ರಯಾಣ ಬೆಳೆಸಿದರು.  

ಇದಕ್ಕೂ ಮುನ್ನ ಬುಧವಾರ ಬೆಳಿಗ್ಗೆ ಉಡುಪಿಯ ಅಂಬಲಪಾಡಿ ದೇವಸ್ಥಾನಕ್ಕೆ ಭೇಟಿನೀಡಿದ ದೇವೇಗೌಡ ದಂಪತಿ ಪೂಜೆ ಸಲ್ಲಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು