ಗುರುವಾರ , ಮೇ 19, 2022
23 °C

ಏರ್‌ಗನ್‌ನಿಂದ ನಾಯಿಯ ಹತ್ಯೆ: ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಜಾವಾಣಿ ವಾರ್ತೆ

ಉಡುಪಿ: ಏರ್‌ ಗನ್‌ನಿಂದ ಶೂಟ್‌ ಮಾಡಿದ ಪರಿಣಾಮ ಸಾಕುನಾಯಿ ಮೃತಪಟ್ಟಿದ್ದು ಈ ಸಂಬಂಧ ಆರೋಪಿ ಬ್ರಾನ್ ಡಿಸೋಜ ಎಂಬ ವ್ಯಕ್ತಿಯನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಫೆ.12ರಂದು ಗುಂಡಪ್ಪ ಪೂಜಾರಿ ‌ಕೆಮ್ಮಣ್ಣು ಪ್ರದೇಶದಲ್ಲಿರುವ ಹಾಲಿನ ಡೈರಿಯಿಂದ ಮೂಡುತೋನ್ಸೆಯಲ್ಲಿರುವ ಮನೆಗೆ ಹೋಗುವಾಗ ಅವರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ನಾಯಿಗೆ ಬ್ರಾನ್ ಡಿಸೋಜ ಏರ್‌ ಗನ್‌ನಿಂದ ಶೂಟ್ ಮಾಡಿದ್ದರು. ನಾಯಿಯ ಹೊಟ್ಟೆಗೆ ಬಲವಾದ ಗಾಯವಾಗಿ ಮೃತಪಟ್ಟಿತ್ತು.

ಈ ಸಂಬಂಧ ಮಲ್ಪೆ ಠಾಣೆಯಲ್ಲಿ ಗುಂಡಪ್ಪ ಪೂಜಾರಿ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿತ್ತು. ಶನಿವಾರ ಆರೋಪಿ ಬ್ರಾನ್ ಡಿಸೋಜಾರನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಅದೇ ದಿನ ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು