ಶನಿವಾರ, ಜೂನ್ 19, 2021
21 °C

ಬೈಂದೂರು ದೋಣಿ ದುರಂತ: ನಾಲ್ವರ ಶವ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೈಂದೂರು (ಉಡುಪಿ): ಕಿರಿಮಂಜೇಶ್ವರದ ಕೊಡೇರಿ ಸಮುದ್ರತೀರದಲ್ಲಿ ಭಾನುವಾರ ಸಂಭವಿಸಿದ್ದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ನಾಲ್ವರು ಮೀನುಗಾರರ ಶವ ಸೋಮವಾರ ಪತ್ತೆಯಾಗಿವೆ.

ಹೊಸಹಿತ್ಲು ಬಳಿ ನಾಗರಾಜ ಖಾರ್ವಿ (55), ಕೊಡೇರಿ ಸಮೀಪದಲ್ಲಿ ಲಕ್ಷ್ಮಣ ಖಾರ್ವಿ (34) ಶೇಖರ್ ಖಾರ್ವಿ ಶವ (39) ಹಾಗೂ ಮಂಜುನಾಥ ಖಾರ್ವಿ (40) ಶವಗಳು ಪತ್ತೆಯಾಗಿವೆ. 

ಭಾನುವಾರ ಶ್ರೀ ಸಾಗರ್ ಹೆಸರಿನ ದೋಣಿ ಅಲೆಗಳ ಉಬ್ಬರಕ್ಕೆ ಸಿಲುಕಿ ಬಂಡೆಗಳಿಗೆ ಅಪ್ಪಳಿಸಿ ಸಮುದ್ರದಲ್ಲಿ ಮಗುಚಿ ಬಿದ್ದಿತ್ತು. ದೋಣಿಯಲ್ಲಿದ್ದ 12 ಮೀನುಗಾರರ ಪೈಕಿ 8 ಮಂದಿಯನ್ನು ರಕ್ಷಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು